ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

By Suvarna Web DeskFirst Published Jan 16, 2017, 11:16 AM IST
Highlights

ಫೆಬ್ರವರಿ 23ರಿಂದ ಪುಣೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಂಬರ್ ಒನ್ ಶ್ರೇಯಾಂಕದ ಟೀಂ ಇಂಡಿಯಾ ಎದುರು ಆಸೀಸ್ ತಂಡ ಮುಖಾಮುಖಿಯಾಗಲಿದೆ.

ವಿಕ್ಟೋರಿಯಾ(ಜ.16): ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ 16 ಮಂದಿಯನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದು ಗ್ಲೇನ್ ಮ್ಯಾಕ್ಸ್'ವೆಲ್ ತಂಡಕ್ಕೆ ಮರಳಿದ್ದಾರೆ. ಇದಲ್ಲದೆ 23 ವರ್ಷದ ಹೊಸ ಸ್ಪಿನ್ ಪ್ರತಿಭೆ ಮಿಚೆಲ್ ಸ್ವಾಪ್ಸನ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

2004ರಿಂದೀಚೆಗೆ ಆಸೀಸ್ ಪಡೆ ಭಾರತದಲ್ಲಿ ಟೆಸ್ಟ್'ನಲ್ಲಿ ಗೆಲುವಿನ ಬರ ಎದುರಿಸುತ್ತಿದೆ. ಹಾಗಾಗಿ ಸ್ಟೀವ್ ಸ್ಮಿತ್ ನೇತೃತ್ವದ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗೆಲುವಿನ ಕನವರಿಕೆಯಲ್ಲಿದೆ.

ಇನ್ನು ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್'ವೆಲ್ ಹಾಗೂ ಮಿಚೆಲ್ ಮಾರ್ಷ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಫೆಬ್ರವರಿ 23ರಿಂದ ಪುಣೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಂಬರ್ ಒನ್ ಶ್ರೇಯಾಂಕದ ಟೀಂ ಇಂಡಿಯಾ ಎದುರು ಆಸೀಸ್ ತಂಡ ಮುಖಾಮುಖಿಯಾಗಲಿದೆ.

 ಆಸೀಸ್ ತಂಡ ಇಂತಿದೆ:

ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಆಸ್ಟನ್ ಅಗರ್, ಜಾಕ್ಸನ್ ಬಿರ್ಡ್, ಪೀಟರ್ ಹ್ಯಾಡ್ಸ್'ಕಂಬ್, ಜೋಸ್ ಹ್ಯಾಜಲ್'ವುಡ್, ಉಸ್ಮಾನಾ ಖ್ವಾಜಾ, ನಾಥನ್ ಲಯಾನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಗ್ಲೇನ್ ಮ್ಯಾಕ್ಸ್'ವೆಲ್, ಸ್ಟೀವ್ ಓ ಕೆಫೆ, ಮ್ಯಾಥ್ಯೂ ರೆನ್'ಷಾ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಾಪ್ಸನ್, ಮ್ಯಾಥ್ಯೂ ವೇಡ್.

click me!