
ನವದೆಹಲಿ(ಡಿ.26): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದ ಬಳಿಕ ಲಂಕಾ ಯುವ ಕ್ರಿಕೆಟಿಗರಿಗೆ ಕೆಲವು ಬ್ಯಾಟಿಂಗ್ ಸ್ಕಿಲ್'ನ ಟಿಪ್ಸ್ ಹೇಳಿಕೊಟ್ಟಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಮ್'ನಲ್ಲಿ ವೈರಲ್ ಆಗಿದೆ.
ಲಂಕಾ ಅನುಭವಿ ಆರಂಭಿಕ ಬ್ಯಾಟ್ಸ್'ಮನ್ ಉಫುಲ್ ತರಂಗಾ ಹಾಗೂ ಯುವ ಕ್ರಿಕೆಟಿಗರಾದ ಅಕಿಲಾ ಧನಂಜಯ ಮತ್ತು ಸದೀರಾ ಸಮರವಿಕ್ರಮ ಅವರಿಗೆ ಕೆಲವು ಉಪಯುಕ್ತ ಬ್ಯಾಟಿಂಗ್ ಕೌಶಲ ಹೇಳಿಕೊಡುತ್ತಿರುವ ವಿಡಿಯೋವೀಗ ಸಾಕಷ್ಟು ಸದ್ದು ಮಾಡುತ್ತಿದೆ.
ಮೂರನೇ ಟಿ20 ಪಂದ್ಯ ಮುಕ್ತಾಯವಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಂಜಯ್ ಮಂಜ್ರೇಕರ್ ಅವರೊಟ್ಟಿಗೆ ಲಂಕಾ ನಾಯಕ ತಿಸಾರ ಪೆರೇರಾ ಮಾತನಾಡುತ್ತಿರುವುದನ್ನು ಕೇಳಿವುದನ್ನು ಬಿಟ್ಟು, ಮಾಹಿಯ ಮಾತನ್ನು ಕೇಳಲು ಲಂಕಾ ಆಟಗಾರರು ಬ್ಯುಸಿಯಾಗಿದ್ದಂತೆ ಕಂಡುಬಂತು...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.