ಘಟಾನುಘಟಿ ಕ್ರಿಕೆಟಿಗರ ಕಾದಾಟಕ್ಕೆ ವೇದಿಕೆಯಾಗಲಿದೆ ಐಸ್ ಕ್ರಿಕೆಟ್..! ಯಾರೆಲ್ಲಾ ಆಡ್ತಾರೆ ಗೊತ್ತಾ..?

By Suvarna Web DeskFirst Published Dec 26, 2017, 4:10 PM IST
Highlights

ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‌'ಗೆ ನಿವೃತ್ತಿ ಹೇಳಿದ ಬಳಿಕ ಮಾಸ್ಟರ್ಸ್‌ ಚಾಂಪಿಯನ್ಸ್ ಲೀಗ್‌'ನಲ್ಲಿ ಸತತವಾಗಿ ಆಡುತ್ತಿದ್ದಾರೆ. 2016ರ ಫೆಬ್ರವರಿಯಿಂದ ಮಾಸ್ಟರ್ಸ್‌ ಲೀಗ್‌'ನ್ನು ಆರಂಭಿಸಲಾಗಿದೆ. ಐಸಿಸಿ ಒಪ್ಪಿಗೆ ಮೇರೆಗೆ ವಿಜೆ ಸ್ಪೋರ್ಟ್ಸ್ ಈ ಪಂದ್ಯಾವಳಿಯನ್ನು ಆಯೋಜಿಸಿದೆ.

ನವದೆಹಲಿ(ಡಿ.26): ಮುಂದಿನ ವರ್ಷ ಫೆ. 8 ಮತ್ತು 9 ರಂದು ಸ್ವಿಜರ್‌'ಲೆಂಡ್‌'ನ ಸೆಂಟ್ ಮೋರಿಟ್ಜ್‌'ನಲ್ಲಿ ನಡೆಯಲಿರುವ ಉದ್ಘಾಟನಾ ಐಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾಜಿ ಕ್ರಿಕೆಟಿಗರಾದ ಗ್ರೇಮ್ ಸ್ಮಿತ್ ಮತ್ತು ಶಾಹಿದ್ ಅಫ್ರಿದಿ ಆಡಲಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಐಸ್ ಟಿ20 ಕ್ರಿಕೆಟ್ ಪಂದ್ಯಾವಳಿಗೆ, ಸ್ಮಿತ್ ಮತ್ತು ಆಫ್ರಿದಿ ಅಲ್ಲದೇ, ಭಾರತದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಪಾಕಿಸ್ತಾನದ ಶೋಯೆಬ್ ಅಖ್ತರ್, ಶ್ರೀಲಂಕಾದ ಮಹೇಲ ಜಯವರ್ಧನೆ, ಲಸಿತ್ ಮಲಿಂಗ, ಮೈಕೆಲ್ ಹಸ್ಸಿ, ಜಾಕ್ ಕಾಲೀಸ್, ಡೇನಿಯಲ್ ವೆಟ್ಟೋರಿ, ನಥಾನ್ ಮೆಕ್ಕಲಂ, ಗ್ರಾಂಟ್ ಈಲಿಯಟ್, ಮಾಂಟಿ ಪನೇಸರ್ ಮತ್ತು ಓವೈಸ್ ಶಾ ಆಡುವುದಾಗಿ ಖಚಿತಪಡಿಸಿದ್ದಾರೆ.

click me!