
ಮೊಹಾಲಿ(ಅ.22): ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಒಂದು ರೀತಿಯ ಅವಿಭಾಜ್ಯ ಅಂಗ ಎಂದರೆ ತಪ್ಪಿಲ್ಲ. ಯಾಕಂದ್ರೆ, ಟೀಮ್ ಇಂಡಿಯಾ ಬಹುತೇಕ ನಂಬಿಕೊಂಡಿರುವುದು ಇವರನ್ನೇ. ಭಾರತದ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ. ಒಂದೊಮ್ಮೆ ಕೊಹ್ಲಿ ಆರಂಭದಲ್ಲೇ ಔಟಾದರೆ ತಂಡ ಇಕ್ಕಟ್ಟಿಗೆ ಸಿಲುಕುತ್ತದೆ. ಗೆತಂಡದ ಗೆಲುವಿನ ಆಸೆ ಕಡಿಯಾಗುತ್ತದೆ. ಇದಕ್ಕೆ ಸಾಕ್ಷಿ ಮೊನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ.
ಆ ಪಂದ್ಯದಲ್ಲಿ 300ರ ಗಡಿ ದಾಟುವ ಸೂಚನೆ ಕೊಟ್ಟಿದ್ದ ನ್ಯೂಜಿಲೆಂಡ್ 242 ರನ್`ಗೆ ಕುಸಿದು ಬಿದ್ದಿತ್ತು. ಆದರೆ, ಬ್ಯಾಟಿಂಗ್ ಪಿಚ್`ನಲ್ಲೂ ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಟೀಮ್ ಇಂಡಿಯಾ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂದು ವಿರಾಟ್ ಕೊಹ್ಲಿ ಕೇವಲ 9 ರನ್`ಗೆ ಔಟಾದ ಬಳಿಕ ಭಾರತ ತಂಡ ಅಕ್ಷರಶಃ ದಿಕ್ಕುತಪ್ಪಿತು. ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್`ಮನ್ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತ್ಯದಲ್ಲಿ ಹಾರ್ದಿಕ್ ಪಾಂಡ್ಯ ಹೋರಾಟ ತೋರಿದರೂ ಗೆಲುವು ದಕ್ಕಲಿಲ್ಲ. ನಾಯಕ ಧೋನಿ ಸೇರಿದಂತೆ ಯಾರೊಬ್ಬರೂ ತಂಡವನ್ನ ದಡ ಸೇರಿಸಲಿಲ್ಲ.
ಮುಗೀತಾ ಧೋನಿ ಜಮಾನ..?: ವಿಶ್ವದ ಗ್ರೇಟ್ ಫಿನಿಶರ್ ಎಂದು ಹೇಳಲಾಗುವ ಧೋನಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಯ ಕಳೆದುಕೊಂಡಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನ ಪಾರು ಮಾಡುತ್ತಿದ್ದ ಧೋನಿಯಿಂದ ಈಗ ಅದು ಸಾಧ್ಯವಾಗುತ್ತಿಲ್ಲ. ಮೊನ್ನೆಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್`ಗೆ ಕ್ಯಾಚ್ ನೀಡಿದ ಧೋನಿ, ತೀರಾ ಕೆಟ್ಟದಾಗಿ ಔಟಾಗಿ ನಿರ್ಗಮಿಸಿದರು. ಇದೊಂದು ನಿದರ್ಶನ ಮಾತ್ರವಲ್ಲ.ಈ ಹಿಂದಿನ ಹಲವು ಪಂದ್ಯಗಳಲ್ಲಿ ಇದೇ ರೀತಿ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.