ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದರೆ ಕೋಚ್‌ಗಳಿಗೂ ನಿಷೇಧ!

By Web DeskFirst Published May 12, 2019, 12:32 PM IST
Highlights

ಇನ್ಮುಂದೆ ಕುಸ್ತಿಪಟುಗಳು ರಾಷ್ಟ್ರೀಯ ಶಿಬಿರ ಇಲ್ಲವೇ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಡೋಪಿಂಗ್‌ ಪರೀಕ್ಷೆಯಲ್ಲಿ ಫೇಲಾದರೆ ಕೋಚ್‌ಗಳಿಗೂ ನಿಷೇಧ ಹೇರುವುದಾಗಿ ಕುಸ್ತಿ ಫೆಡರೇಷನ್‌ ನೂತನ ನಿಯಮ ಜಾರಿ ಮಾಡಿದೆ. 

ನವದೆಹಲಿ[ಮೇ.12]: ಭಾರತೀಯ ಕುಸ್ತಿಪಟುಗಳು ಉದ್ದೀಪನಾ ಮದ್ದು ಸೇವಿಸುವುದನ್ನು ತಡೆಗಟ್ಟಲು ಭಾರತೀಯ ಕುಸ್ತಿ ಫೆಡರೇಷನ್‌ ಹೊಸ ಯೋಜನೆ ರೂಪಿಸಿದೆ. 

ಇನ್ಮುಂದೆ ಕುಸ್ತಿಪಟುಗಳು ರಾಷ್ಟ್ರೀಯ ಶಿಬಿರ ಇಲ್ಲವೇ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಡೋಪಿಂಗ್‌ ಪರೀಕ್ಷೆಯಲ್ಲಿ ಫೇಲಾದರೆ ಕೋಚ್‌ಗಳಿಗೂ ನಿಷೇಧ ಹೇರುವುದಾಗಿ ಕುಸ್ತಿ ಫೆಡರೇಷನ್‌ ನೂತನ ನಿಯಮ ಜಾರಿ ಮಾಡಿದೆ. ಇದರ ಜತೆಗೆ ದೊಡ್ಡ ಮೊತ್ತದ ದಂಡ ಸಹ ವಿಧಿಸುವುದಾಗಿ ತಿಳಿಸಿದೆ. 

ಕಳೆದ 2 ವರ್ಷಗಳಲ್ಲಿ ಹಲವು ಕುಸ್ತಿಪಟುಗಳು ಡೋಪಿಂಗ್‌ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ, ವಿಶ್ವ ಕುಸ್ತಿ ಸಂಸ್ಥೆಗೆ, ಭಾರತೀಯ ಕುಸ್ತಿ ಫೆಡರೇಷನ್‌ 32 ಲಕ್ಷ ದಂಡ ಪಾವತಿಸಿದೆ. ನೂತನ ನಿಯಮದಿಂದಾಗಿ ಕೋಚ್‌ಗಳ ಮೇಲಿನ ಜವಾಬ್ದಾರಿ ಹೆಚ್ಚಲಿದೆ. ಕುಸ್ತಿಪಟುಗಳು ಸೇವಿಸುವ ಆಹಾರ, ಔಷಧಿಗಳ ಮೇಲೆ ಕೋಚ್‌ಗಳು ಕಣ್ಣಿಡಬೇಕಾದ ಪರಿಸ್ಥಿತಿ ಎದುರಾಗಲಿದೆ.
 

click me!