ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಮೇಲಿನ ನಿಷೇಧ ಕಡಿತಗೊಳಿಸಲಾಗಿದೆ. ಬಿಸಿಸಿಐ ನಿರ್ಧಾರದ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಶ್ರೀಶಾಂತ್ ತಯಾರಿ ಆರಂಭಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೈಲಿಗಲ್ಲಿಗಾಗಿ ಶ್ರೀ ಕಾಯುತ್ತಿದ್ದಾರೆ.
ಮುಂಬೈ(ಆ.21): 42ರಲ್ಲಿ ಲಿಯಾಂಡರ್ ಪೇಸ್ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದರೆ, 36ರರಲ್ಲಿ ನಾನ್ಯಾಕೆ ಕ್ರಿಕೆಟ್ ಆಡಬಾರದು? ಎಂದು ಈ ಹಿಂದೆಯೇ ಶ್ರೀಶಾಂತ್ ಪ್ರಶ್ನೆ ಮಾಡಿದ್ದರು. ಇದೀಗ 37ರ ಹರೆಯದಲ್ಲಿ ಮತ್ತೆ ಕ್ರಿಕೆಟ್‌ಗೆ ಮರಳಲು ವೇಗಿ ಎಸ್ ಶ್ರೀಶಾಂತ್ ರೆಡಿಯಾಗಿದ್ದಾರೆ. ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಿದ ಬೆನ್ನಲ್ಲೇ, ಶ್ರೀಶಾಂತ್ ಇದೀಗ ಕ್ರಿಕೆಟ್ ಅಭ್ಯಾಸದತ್ತ ಗಮನ ಹರಿಸಿದ್ದಾರೆ.
ಇದನ್ನೂ ಓದಿ: ಶ್ರೀಶಾಂತ್‍ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!
undefined
2013ರ ಸ್ಫಾಟ್ ಫಿಕ್ಸಿಂಗ್ ಆರೋಪದಿಂದ ಶ್ರೀಶಾಂತ್ ಮೇಲಿ ಬಿಸಿಸಿಐ ಅಜೀವ ನಿಷೇಧ ಹೇರಿತ್ತು. ಶ್ರೀಶಾಂತ್ ಸತತ ಹೋರಾಟ, ಕಾನೂನು ಸಮರದಿಂದ ಬಿಸಿಸಿಐ ಶ್ರೀ ಮೇಲಿನ ನಿಷೇಧವನ್ನು 7 ವರ್ಷಕ್ಕೆ ಕಡಿತಗೊಳಿಸಿದೆ. ಈಗಾಗಲೇ 6 ವರ್ಷ ಪೂರೈಸಿರುವ ಶ್ರೀಶಾಂತ್, ಮುಂದಿನ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಶಾಂತ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ. ಆಗಸ್ಟ್ ವೇಳೆಗೆ ಶ್ರೀಶಾಂತ್ ನಿಷೇಧ ಶಿಕ್ಷೆ ಪೂರ್ಣಗೊಳ್ಳಲಿದೆ. ಬಿಸಿಸಿಐ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಿದ ಬೆನ್ನಲ್ಲೇ, ಇದೀಗ ಶ್ರೀಶಾಂತ್ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!
ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸುವುದೇ ನನ್ನ ಗುರಿ ಎಂದು ಶ್ರೀಶಾಂತ್ ಹೇಳಿದ್ದಾರೆ. 27 ಟೆಸ್ಟ್ ಪಂದ್ಯದಿಂದ 87 ವಿಕೆಟ್ ಕಬಳಿಸಿರುವ ಶ್ರೀಶಾಂತ್ 3.62ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಶ್ರೀಶಾಂತ್ ಗುರಿಗೆ ಇನ್ನು13 ವಿಕೆಟ್‌ಗಳ ಅವಶ್ಯಕತೆ ಇದೆ. ಈಗಿನಿಂದಲೇ ಅಭ್ಯಾಸ ಆರಂಭಿಸುತ್ತೇನೆ. ಅತ್ಯುತ್ತಮ ಪ್ರದರ್ಶನದ ಮೂಲಕ ಮತ್ತೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡೋ ವಿಶ್ವಾಸವಿದೆ ಎಂದು ಶ್ರೀ ಹೇಳಿದ್ದಾರೆ.