ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!

By Web Desk  |  First Published Aug 21, 2019, 3:19 PM IST

ಗಾಲೆ ಟೆಸ್ಟ್ ಪಂದ್ಯದ ವೇಳೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಶ್ರೀಲಂಕಾ ತಂಡದ ಸ್ಪಿನ್ನರ್ ಅಖಿಲಾ ಧನಂಜಯ್ ಅನುಮಾನಾಸ್ಪದ ಬೌಲಿಂಗ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ದುಬೈ[ಆ.21]: ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಶ್ರೀಲಂಕಾ ತಂಡದ ಸ್ಪಿನ್ನರ್‌ ಅಖಿಲ ಧನಂಜಯ ಅನುಮಾನಸ್ಪದ ಬೌಲಿಂಗ್‌ ಶೈಲಿ ಸುಳಿಗೆ ಸಿಲುಕಿದ್ದಾರೆ. 

ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

Tap to resize

Latest Videos

ಗಾಲೆಯಲ್ಲಿ ನಡೆದ ಲಂಕಾ ಹಾಗೂ ಕಿವೀಸ್‌ ನಡುವಿನ ಮೊದಲ ಟೆಸ್ಟ್‌ನಲ್ಲಿ ಇಬ್ಬರ ಬೌಲಿಂಗ್‌ ಶೈಲಿ ಬಗ್ಗೆ ಅನುಮಾನ ಮೂಡಿಸಿದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹೇಳಿದೆ. ಪಂದ್ಯದ ಅಂಪೈರ್‌ಗಳು, ರೆಫ್ರಿ ಎರಡೂ ತಂಡಗಳ ಆಡಳಿತಕ್ಕೆ ಶಂಕಾಸ್ಪದ ಬೌಲಿಂಗ್‌ ಕುರಿತು ಮಾಹಿತಿ ನೀಡಿದರು ಎಂದು ಐಸಿಸಿ ತಿಳಿಸಿದೆ. ಈ ಹಿಂದೆಯೂ ಈ ಇಬ್ಬರು ಕ್ರಿಕೆಟಿಗರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ಮೂಡಿತ್ತು.

ಗಾಲೆ ಟೆಸ್ಟ್: ಕಿವೀಸ್ ಮಣಿಸಿ ಇತಿಹಾಸ ಬರೆದ ಶ್ರೀಲಂಕಾ

14 ದಿನಗಳೊಳಗೆ ಕೇನ್‌ ಹಾಗೂ ಧನಂಜಯ ಬೌಲಿಂಗ್‌ ಪರೀಕ್ಷೆಗೆ ಹಾಜರಾಗಬೇಕಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ತಂಡವು 6 ವಿಕೆಟ್’ಗಳ ಜಯ ಸಾಧಿಸಿದೆ. 
 

click me!