ಲಕ್ಷ್ಮಣ್ ತಂಡದಲ್ಲಿ 3 ಕನ್ನಡಿಗರಿಗೆ ಅವಕಾಶ-ಗಂಗೂಲಿಗೆ ನಾಯಕತ್ವ

By Web DeskFirst Published Aug 29, 2018, 3:22 PM IST
Highlights

ಕಳದ 25 ವರ್ಷಗಳ ಬೆಸ್ಟ್ ಆಟಗಾರರ ತಂಡವನ್ನ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆಯ್ಕೆ ಮಾಡಿದ್ದಾರೆ. ವಿವಿಎಸ್ ಆಯ್ಕೆ ಮಾಡಿದ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಹೇಗಿದೆ ಲಕ್ಷ್ಮಣ್ ತಂಡ? ಇಲ್ಲಿದೆ.

ಮುಂಬೈ(ಆ.29): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕಳೆದ 25 ವರ್ಷಗಳಲ್ಲಿ ಅತ್ಯುತ್ತಮ ಆಟಗಾರರ ಟೆಸ್ಟ್ ತಂಡವನ್ನ ಆಯ್ಕೆ ಮಾಡಿದ್ದಾರೆ. 25 ವರ್ಷಗಳಲ್ಲಿ ಭಾರತ ತಂಡದಲ್ಲಿ ಮಿಂಚಿದ ಹಾಗೂ ಮುಂಚುತ್ತಿರುವ ಕ್ರಿಕೆಟಿಗರ ತಂಡದಲ್ಲಿ ಲಕ್ಷ್ಮಣ್ ಮೂವರು ಕನ್ನಡಿಗರಿಗೆ ಅವಕಾಶ ನೀಡಿದ್ದಾರೆ.

ಲಕ್ಷ್ಣಣ್ ಆಯ್ಕೆ ಮಾಡಿದ ಬೆಸ್ಟ್ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಎಂ ಎಸ್ ಧೋನಿ ಬದಲು ಸೌರವ್ ಗಂಗೂಲಿಗೆ ನಾಯಕತ್ವ ನೀಡಿದ್ದಾರೆ. ಧೋನಿಗೆ ವಿಕೆಟ್ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ನೀಡಲಾಗಿದೆ. 

ವಿಶೇಷ ಅಂದರೆ ಲಕ್ಷ್ಮಣ್ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಸ್ಥಾನ ಪಡೆದಿದ್ದಾರೆ.

ಲಕ್ಷ್ಮಣ್ ಆಯ್ಕೆ ಮಾಡಿದ ತಂಡ:
ಸೌರವ್ ಗಂಗೂಲಿ(ನಾಯಕ),ವೀರೇಂದ್ರ ಸೆಹ್ವಾಗ್, ಮುರಳಿ ವಿಜಯ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ಅನಿಲ್ ಕುಂಬ್ಳೆ, ಭುವನೇಶ್ವರ್ ಕುಮಾರ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್.

click me!