ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

By Web DeskFirst Published Oct 3, 2019, 2:19 PM IST
Highlights

ಕನ್ನಡಿಗ ಮಯಾಂಕ್ ಅಗರ್‌ವಾಲ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಜತೆಗೆ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ವಿಶಾಖಪಟ್ಟಣಂ[ಅ.03]: ಕನ್ನಡಿಗ ಮಯಾಂಕ್ ಅಗರ್ ವಾಲ್ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ 358 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದಾರೆ. ಅವರ ಮನಮೋಹಕ ಇನಿಂಗ್ಸ್’ನಲ್ಲಿ 22 ಬೌಂಡರಿ ಹಾಗೂ 5 ಸಿಕ್ಸರ್’ಗಳು ಸೇರಿದ್ದವು.

ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್‌ವಾಲ್

Mayank Agarwal, you beauty. opener brings up his maiden 💯💯 in Test cricket. pic.twitter.com/TdrcHzN9fj

— BCCI (@BCCI)

ಮೊದಲ ದಿನದಾಟದ ಅಂತ್ಯಕ್ಕೆ 84 ರನ್ ಬಾರಿಸಿದ್ದ ಮಯಾಂಕ್ ಇಂದು 204 ಎಸೆತಗಳನ್ನು ಎದುರಿಸಿ ಚೊಚ್ಚಲ ಶತಕ ಸಿಡಿಸಿದ್ದರು. ಇದಾದ ಬಳಿಕವೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಮಯಾಂಕ್ ಹರಿಣಗಳ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು. ಅವಕಾಶ ಒದಗಿ ಬಂದಾಗಲೆಲ್ಲಾ ಮುಲಾಜಿಲ್ಲದೇ ಚೆಂಡನ್ನು ಬೌಂಡರಿಗಟ್ಟಿದ ಮಯಾಂಕ್, ಉಳಿದ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು. 

ಮಯಾಂಕ್ ಸಂದರ್ಶನ: ಮಯಾಂಕ್ ಅಗರ್’ವಾಲ್ ಜತೆ 10 ಮಾತು ನೂರು ದನಿ..!

ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಭಾರತದ ನಾಲ್ಕನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಇದೀಗ ಮಯಾಂಕ್ ಪಾಲಾಗಿದೆ. ಈ ಮೊದಲು ದಿಲೀಪ್ ಸರ್ದೇಸಾಯಿ[200*], ವಿನೋದ್ ಕಾಂಬ್ಳಿ[200] ಹಾಗೂ ಕರುಣ್ ನಾಯರ್[303*] ಪ್ರಥಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದರು.

click me!