
ಬರ್ಮಿಂಗ್ಹ್ಯಾಮ್(ಜೂ.04): ಭಾರತ - ಪಾಕ್ ಪಂದ್ಯವೆಂದರೆ ಹೈಲೋಲ್ಟೇಜ್ ಪಂದ್ಯವಿದ್ದಂತೆ. ಬಿಸಿಬಿಸಿ ಮ್ಯಾಚ್'ಗೆ ತಕ್ಕಂತೆ ಭಾರತ ತಂಡದವರು ಬ್ಯಾಟಿಂಗ್ ಮಾಡಿದ್ದಾರೆ. ಮೂರು ಬಾರಿ ಮಳೆ ಬಂದು ಪಂದ್ಯ ತಾತ್ಲಾಲಿಕ ಸ್ಥಗಿತವಾದರೂ ತಲೆಕೆಡಿಸಿಕೊಳ್ಳದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿ 48 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319 ಬೃಹತ್ ಮೊತ್ತ ಗಳಿಸಿದ್ದಾರೆ.
ಬರ್ಮಿಂಗ್ಹ್ಯಾಮ್'ನ ಎಡ್ಜ್ಬಾಸ್ಟನ್'ನ ಕ್ರೀಡಾಂಗಣದಲ್ಲಿ ಐಸಿಸಿ ಚಾಂಪಿಯನಸ್ ಟ್ರೋಪಿಯ 4ನೇ ಪಂದ್ಯದಲ್ಲಿ ಟಾಸ್ ಸೋತ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಪ್ರಾರಂಭಿಸಿದರು. 9.5 ಓವರ್'ನಲ್ಲಿ ಟೀಂ 52 ರನ್ ಗಳಿಸಿದ್ದಾಗ ಇರುವಾಗ ಮೊದಲ ಬಾರಿಗೆ ಮಳೆ ಬಂತು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದು ಮತ್ತೆ ಆಟ ಶುರುವಾಯಿತು.
24.3 ಓವರ್'ಗಳಿದ್ದಾಗ ಶಿಖರ್ ಧವನ್, ಶದಾಬ್ ಖಾನ್ ಬೌಲಿಂಗ್'ನಲ್ಲಿ ಅಜರ್ ಅಲಿಗೆ ಕ್ಯಾಚಿತ್ತು ನಿರ್ಗಮಿಸಿದರು.65 ಎಸತಗಳಲ್ಲಿ ಸ್ಫೋಟಿಸಿದ ಇವರ 68 ರನ್'ಗಳಲ್ಲಿ 6 ಸಿಕ್ಸ್'ರ್ ಹಾಗೂ 1 ಬೌಂಡರಿಗಳಿದ್ದವು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಮೊದಮೊದಲು ನಿಧಾನಗತಿಯಲ್ಲಿ ಆಟವಾಡಿ, ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾಗೆ ನೆರವಾಗುತ್ತಿದ್ದರು.
91 ರನ್ ಗಳಿಸಿದ್ದಾಗ ಆಕಸ್ಮಿಕವಾಗಿ ರನ್ ಔಟ್ ರೋಹಿತ್ ಶರ್ಮಾ ರನ್ ಔಟ್ ಆದರು. 119 ಎಸತೆಗಳ ಇವರ ಖಾತೆಯಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು. ನಂತರ ಯುವರಾಜ್ ಸಿಂಗ್ ಬ್ಯಾಟಿಂಗ್ ಬಂದಾಗ ಪಂದ್ಯದ ಗತಿಯೇ ಬದಲಾಯಿತು. ಕೊಹ್ಲಿ ಮತ್ತು ಯುವರಾಜ್ ಮೂರನೇ ವಿಕೇಟ್ ನಷ್ಟಕ್ಕೆ 46.2 ಓವರ್'ಗಳಲ್ಲಿ 285 ರನ್ ಕಲೆ ಹಾಕಿದರು. ಯುವರಾಜ್ ಸಿಂಗ್ ಔಟಾದಾಗ 49 ಎಸತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 53 ರನ್ ಜಮೆಯಾಗಿತ್ತು.
ಕೊನೆಯ 10 ಎಸತಗಳಿದ್ದಾಗ ಕ್ರೀಸ್'ಗಿಳಿದ ಹರ್ದಿಕ್ ಪಾಂಡ್ಯ ಕೇವಲ 6 ಎಸತಗಳಲ್ಲಿ ಮೂರು ಹ್ಯಾಟ್ರಿಕ್ ಸಿಕ್ಸ್' ಸಿಡಿಸುವುದರೊಂದಿಗೆ 20 ರನ್ ಬಾರಿಸಿದರು. ಭರ್ಜರಿ ಆಟವಾಡಿ ಅಜೇಯರಾಗಿ ಉಳಿದ ನಾಯಕ ವಿರಾಟ್ ಕೊಹ್ಲಿ ಕೂಡ 68 ಎಸತಗಳಲ್ಲಿ 6 ಬೌಂಡರಿ 3 ಸ್ಫೋಟಕ ಸಿಕ್ಸ್'ರ್ ಬಾರಿಸಿದ್ದರು. ಅಂತಿಮವಾಗಿ ಭಾರತ 48 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319 ರನ್'ಗಳ ಬೃಹತ್ ರನ್ ಗಳಿಸಿತು. ಬ್ಯಾಟಿಂಗ್ ಮಾಡಿದ ಐವರು ಬ್ಯಾಟ್ಸ್'ಮೆನ್'ಗಳಲ್ಲಿ ನಾಲ್ವರು ಅರ್ಧ ಶತಕ ದಾಖಲಿಸಿದ್ದು ಕೂಡ ದಾಖಲೆಯೆ.
289 ರನ್ ಟಾರ್ಗೆಟ್
ಮೂರು ಬಾರಿ ಮಳೆ ಬಂದ ಕಾರಣ ಪಾಕಿಸ್ತಾನಕ್ಕೆ ಡೆಕ್ವರ್ಥ್ ಲೂಯಿಸ್ ಅನ್ವಯ 41 ಓವರ್'ಗಳಲ್ಲಿ 289 ರನ್ ಟಾರ್ಗೆಟ್ ನೀಡಲಾಗಿದೆ.ಪಂದ್ಯ ಶುರುವಾಗಿದ್ದು, ಪಾಕ್ 2 ಓವರ್'ಗಳಲ್ಲಿ ಯಾವುದೇ ವಿಕೇಟ್ ನಷ್ಟವಿಲ್ಲದೆ 10 ರನ್ ಗಳಿಸಿತ್ತು. ಅಜರ್ ಅಲಿ ಹಾಗೂ ಅಹ್ಮದ್ ಶೆಹಜದ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಸ್ಕೋರ್
ಭಾರತ 48 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319
(ರೋಹಿತ್: 91, ಧವನ್:68, ಕೊಹ್ಲಿ:81, ಯುವರಾಜ್:53, ಪಾಂಡ್ಯ:20)
ಪಾಕಿಸ್ತಾನಕ್ಕೆಗೆಲ್ಲಲು 41 ಓವರ್'ಗಳಲ್ಲಿ 289 ರನ್ ಟಾರ್ಗೆಟ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.