ಬರ್ಮಿಂಗ್ ಹ್ಯಾಂನಲ್ಲಿ ಬದ್ಧ ವೈರಿಗಳ ಹೈವೋಲ್ಟೇಜ್ ಮ್ಯಾಚ್: ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ ಬಿಗ್ ವಾರ್

Published : Jun 04, 2017, 08:15 AM ISTUpdated : Apr 11, 2018, 01:08 PM IST
ಬರ್ಮಿಂಗ್ ಹ್ಯಾಂನಲ್ಲಿ  ಬದ್ಧ ವೈರಿಗಳ ಹೈವೋಲ್ಟೇಜ್ ಮ್ಯಾಚ್: ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ ಬಿಗ್ ವಾರ್

ಸಾರಾಂಶ

ಬದ್ಧ ವೈರಿಗಳಾದ ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂದರೆ ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿರುತ್ತಾರೆ, ಆ ಕ್ಷಣಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿತ್ತಾರೆ. ಆ ಕ್ಷಣ ಮತ್ತೆ ಬಂದೇ ಬಿಟ್ಟಿದೆ. ಇಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಡೋ - ಪಾಕ್ ಕಾದಾಡಲಿದ್ದು  ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಕೆಲವೇ ಕ್ಷಣ ಬಾಕಿಯಿವೆ.

ನವದೆಹಲಿ(ಜೂ.04): ಬದ್ಧ ವೈರಿಗಳಾದ ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂದರೆ ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿರುತ್ತಾರೆ, ಆ ಕ್ಷಣಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿತ್ತಾರೆ. ಆ ಕ್ಷಣ ಮತ್ತೆ ಬಂದೇ ಬಿಟ್ಟಿದೆ. ಇಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಡೋ - ಪಾಕ್ ಕಾದಾಡಲಿದ್ದು  ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಕೆಲವೇ ಕ್ಷಣ ಬಾಕಿಯಿವೆ.

ಆದರೆ ಈ ಹಿಂದಿನ ಪಂದ್ಯಗಳಿಗಿಂತ ಇಂದಿನ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ. ಕಾರಣ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕೆಣಕಿ ಯುದ್ಧಕ್ಕೆ ಆಹ್ವಾನಿಸುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಕೂಡ ಕ್ರಿಕೆಟ್- ಭಯತ್ಪಾದನೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಹೇಳಿದೆ. ಈ ನಡುವೆ ಇಂದು ಇಂಗ್ಲೆಂಡ್'ನಲ್ಲಿ ಹೈ ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಚಾಂಪಿಯನ್ಸ್​​ ಟ್ರೋಫಿ ವಿಷ್ಯಕ್ಕೆ ಬಂದ್ರೆ ಪಾಕಿಸ್ತಾನದ ಕೈ ಮೇಲಾಗುತ್ತೆ. ಕಾರಣ ಇದುವರೆಗೂ 3 ಬಾರಿ ಈ ಎರಡೂ ತಂಡಗಳು ಚಾಂಪಿಯನ್ಸ್​​​ ಟ್ರೋಫಿ ಇತಿಹಾಸದಲ್ಲಿ ಮುಖಾಮುಖಿಯಾಗಿವೆ. 3 ರಲ್ಲಿ ಪಾಕಿಸ್ತಾನ ಎರಡರಲ್ಲಿ ಗೆದ್ದಿದ್ದರೆ ಟೀಂ ಇಂಡಿಯಾ ಗೆದ್ದಿರುವುದು ಒಂದೇ ಒಂದು ಪಂದ್ಯ.

ಇನ್ನೂ ಎರಡೂ ತಂಡಗಳ ಬಲಾಬಲ ನೋಡುವುದಾದರೆ. ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಸ್ಟ್ರಾಂಗ್​​ ಇದೆ. ಪಾಕಿಸ್ತಾನ ಯುವ ಆಟಗಾರರ ತಂಡ.. ಹೆಚ್ಚು ಹೊಸ ಮುಖಗಳೇ. ಆದರೆ ಎಲ್ಲರೂ ಅದ್ಭುತ ಆಟಗಾರರು. ಭಾರತವನ್ನ ಮಣಿಸಲು ಸಜ್ಜಾಗಿ ನಿಂತಿದ್ದಾರೆ.

ಒಟ್ಟಿನಲ್ಲಿ ಹೈವೋಲ್ಟೇಜ್​​ ಪಂದ್ಯ ವೀಕ್ಷಣೆಗೆ ಎರಡೂ ದೇಶಗಳ ಕ್ರಿಕೆಟ್​​ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇಡೀ ವಿಶ್ವವೇ ಇಂಡೋ ಪಾಕ್​ ಕ್ರಿಕೆಟ್ ವಾರ್​​ ಕಣ್ಣಾರೆ ಕಾಣಲು ಜಪಿಸುತ್ತಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು ಕ್ರಿಕೆಟ್ ಪ್ರಿಯರು ಟಿವಿ ಮುಂದೆ ಕೂರಲು ಸಜ್ಜಾಗಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!