ಕೊಹ್ಲಿ ದಾಖಲೆ ಮುರಿದ ರನ್ ಮಷಿನ್’

By Suvarna Web DeskFirst Published Jun 3, 2017, 11:57 PM IST
Highlights

ಟೆಸ್ಟ್ ಹಾಗೂ ಏಕದಿನದಲ್ಲಿ ತಲಾ 25 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ದಾಖಲಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆಗೆ ಅವರು ಪಾತ್ರರಾದರು.

ದಕ್ಷಿಣ ಆಫ್ರಿಕಾದ ‘ರನ್ ಮಷಿನ್’ ಹಾಶಿಂ ಆಮ್ಲಾ ಏಕದಿನ ಕ್ರಿಕೆಟ್‌ನಲ್ಲಿ ವೇಗದ 25 ಶತಕ ಬಾರಿಸಿದ ದಾಖಲೆ ಬರೆದಿರು.103 ರನ್ ಗಳಿಸಿದ ಆಮ್ಲಾ, ಭಾರತದ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 151ನೇ ಏಕದಿನ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಈ ಮೈಲಿಗಲ್ಲು ತಲುಪಿದರು.

25 ಶತಕ ಪೂರೈಸಲು ವಿರಾಟ್, 162 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.ಈ ಶತಕದ ಮೂಲಕ ಆಮ್ಲಾ ದಿಗ್ಗಜ ಆಟಗಾರರ ಸಾಲಿಗೆ ಸೇರ್ಪಡೆಗೊಂಡರು. ಟೆಸ್ಟ್ ಹಾಗೂ ಏಕದಿನದಲ್ಲಿ ತಲಾ 25 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ದಾಖಲಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. ಈ ಮೊದಲು ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಹಾಗೂ ಕುಮಾರ ಸಂಗಕ್ಕರ ಈ ಸಾಧನೆ ಮಾಡಿದ್ದರು.

click me!