ವಿರಾಟ್ ಕೊಹ್ಲಿಗೆ ಶುರುವಾಯ್ತು ಆತಂಕ; ಇನ್ನೊಂದು ತಪ್ಪು ಮಾಡಿದ್ರೆ ಬ್ಯಾನ್!

By Web DeskFirst Published Sep 25, 2019, 5:24 PM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಆತಂಕ ಶುರುವಾಗಿದೆ. ಇನ್ನೊಂದು ತಪ್ಪು ಮಾಡಿದರೆ ಅಂತಾರಾಷ್ಟ್ರೀಯ ಪಂದ್ಯದಿಂದ ಬ್ಯಾನ್ ಆಗಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಕೊಹ್ಲಿಗೆ ಇದೀಗ ಅಮಾನತು ಭೀತಿ ಕಾಡುತ್ತಿದೆ.
 

ಮುಂಬೈ(ಸೆ.25): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದ್ದಾರೆ. ಟಿ20 ಸರಣಿಯಲ್ಲಿ ಸರಣಿ ಸಮಬಲ ಮಾಡಿಕೊಂಡ ಕೊಹ್ಲಿ, ಇದೀಗ ಟೆಸ್ಟ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಅಲಭ್ಯತೆ ಕೊಹ್ಲಿ ಚಿಂತೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕೊಹ್ಲಿಗೆ ಮತ್ತೊಂದು ಆತಂಕ ಶುರುವಾಗಿದೆ. ಇನ್ನೊಂದು ತಪ್ಪು ಮಾಡಿದರೆ ಕೊಹ್ಲಿಗೆ ಅಂತಾರಾಷ್ಟ್ರೀಯ ಪಂದ್ಯದಿಂದ ಅಮಾನತಾಗಲಿದ್ದಾರೆ.

ಇದನ್ನೂ ಓದಿ: ಟಿ20 ಪಂದ್ಯದ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ಮತ್ತೊಂದು ಶಾಕ್!

ಬೆಂಗಳೂರು ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಸೌತ್ ಆಫ್ರಿಕಾ ವೇಗಿ ಬ್ಯುರನ್ ಹೆಂಡ್ರಿಕ್ಸ್‌ಗೆ ಉದ್ದೇಶಪೂರ್ವಕವಾಗಿ ಭುಜ ತಾಗಿಸಿ ಐಸಿಸಿ ನಿಯಮ ಉಲ್ಲಂಘಿಸಿದ್ದರು. ಪಂದ್ಯದ ಬಳಿಕ ತಪ್ಪು ಒಪ್ಪಿಕೊಂಡ ವಿರಾಟ್ ಕೊಹ್ಲಿಗೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿ, 1 ಡಿಮೆರಿಟ್ ಅಂಕ ಪಡೆದಿದ್ದರು. ಈ ಮೂಲಕ ಕೊಹ್ಲಿ 2 ವರ್ಷದಲ್ಲಿ ಡಿಮೆರಿಟ್ ಒಟ್ಟು 3 ಡಿಮೆರಿಟ್ ಅಂಕ ಪಡೆದಿದ್ದಾರೆ. 

ಇದನ್ನೂ ಓದಿ: ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಹೊಡೆತ!

ಇನ್ನೊಂದು ಡಿಮೆರಿಟ್ ಅಂಕ ಪಡೆದರೆ ಕೊಹ್ಲಿಗೆ 1 ಟೆಸ್ಟ್ ಅಥವಾ 2 ಟಿ20, 2 ಏಕದಿನ ಪಂದ್ಯದಿಂದ ನಿಷೇಧ ಶಿಕ್ಷೆಯಾಗಲಿದೆ. 24 ತಿಂಗಳಲ್ಲಿ 4 ಡಿಮೆರಿಟ್ ಅಂಕ ಪಡೆದರೆ ಈ ನಿಯಮ ಅನ್ವಯವಾಗಲಿದೆ. ಜನವರಿ 15, 2018ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ ಕೊಹ್ಲಿ ಮೊದಲ ಡಿಮೆರಿಟ್ ಆಂಕ ಪಡೆದಿದ್ದರು. ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 2ನೇ ಡಿಮೆರಿಟ್ ಪಾಯಿಂಟ್ ಪಡೆದಿದ್ದರು. ಸೌತ್ ಆಫ್ರಿಕಾ ವಿರುದ್ಧದ ಬೆಂಗಳೂರು ಟಿ20 ಪಂದ್ಯದಲ್ಲಿ 3ನೇ ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ.

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡದ ಜೊತೆ ಕಿಚ್ಚನ ಪ್ರಯಾಣ; ಸರ್ಪ್ರೈಸ್ ನೀಡಿದ ಪೈಲ್ವಾನ!

ಐಸಿಸಿ ನಿಯಮ ಲೆವೆಲ್ 1 ಉಲ್ಲಂಘಿಸಿದರೆ ಕನಿಷ್ಠ,  ದಂಡ ಅಥವಾ ಎಚ್ಚರಿಕೆ ಸಿಗಲಿದೆ. ಗರಿಷ್ಠ ಪಂದ್ಯದ ಶೇಕಡಾ 50 ರಷ್ಟು ದಂಡ ಹಾಗೂ ಒಂದು ಅಥವಾ ಡಿಮೆರಿಟ್ ಅಂಕ ನೀಡಲಾಗುತ್ತೆ. 24 ತಿಂಗಳಲ್ಲಿ ಆಟಗಾರರ 3 ರಿಂದ 4 ಡಿಮೆರಿಟ್ ಅಂಕಪಡೆದಿದ್ದರೆ ಒಂದು ಟೆಸ್ಟ್ ಪಂದ್ಯ ಅಥವಾ 2  ಟಿ20, 2 ಏಕದಿನ ಪಂದ್ಯದಿಂದ ನಿಷೇದ ಹೇರಲಾಗುತ್ತೆ.
 

click me!