
ನವದೆಹಲಿ[ಸೆ.25]: ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ, ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತ ತಂಡದ ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದೆ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2019: ಬೆಳ್ಳಿಗೆ ತೃಪ್ತಿಪಟ್ಟ ದೀಪಕ್
ಭಾರತೀಯ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್’ಗಳಲ್ಲಿ ಸತತವಾಗಿ ಪದಕ ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ, ಕುಸ್ತಿ ರಾಷ್ಟ್ರೀಯ ಕ್ರೀಡೆ ಎಂದು ಕರೆಸಿಕೊಳ್ಳಲು ಯೋಗ್ಯ ಎಂದು ಕೇಂದ್ರ ಕ್ರೀಡಾ ಸಚಿವಾಲಯದಿಂದಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ವೇಳೆ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವ ರಿಜಿಜು, ‘ಒಂದು ಕ್ರೀಡೆಗೆ ಮಹತ್ವ ನೀಡಲು ಸಾಧ್ಯವಿಲ್ಲ. ಎಲ್ಲಾ ಕ್ರೀಡೆಯೂ ಮುಖ್ಯ. ಕುಸ್ತಿಪಟುಗಳ ಸಾಧನೆ ಬಗ್ಗೆ ಹೆಮ್ಮೆ ಇದೆ’ ಎಂದರು.
ವಿಶ್ವ ಕುಸ್ತಿ ಕೂಟ: ಭಜರಂಗ್‌ಗೆ ಕಂಚು, ಸುಶೀಲ್ಗೆ ಶಾಕ್..!
ಕುಸ್ತಿ ಸಾಧಕರಿಗೆ ಕ್ರೀಡಾ ಸಚಿವರಿಂದ ಬಹುಮಾನ
ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತೀಯ ಕುಸ್ತಿಪಟುಗಳಿಗೆ ಮಂಗಳವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಬಹುಮಾನ ನೀಡಿ ಗೌರವಿಸಿದರು. ಪುರುಷರ 86 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ದೀಪಕ್ ಪೂನಿಯಾಗೆ ₹7 ಲಕ್ಷ, ಕಂಚು ಗೆದ್ದ ಭಜರಂಗ್ ಪೂನಿಯಾ (65 ಕೆ.ಜಿ), ವಿನೇಶ್ ಫೋಗಾಟ್ (53 ಕೆ.ಜಿ), ರಾಹುಲ್ ಅವಾರೆ (61 ಕೆ.ಜಿ), ರವಿ ದಹಿಯಾ (57 ಕೆ.ಜಿ)ಗೆ ತಲಾ ₹4 ಲಕ್ಷ ಮೊತ್ತದ ಚೆಕ್ ವಿತರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.