ಕೋಚ್ ಆಯ್ಕೆ: ಕೊಹ್ಲಿ ಮಾತಿಗಿಲ್ಲ ಮನ್ನಣೆ..?

By Web DeskFirst Published Jul 19, 2019, 12:45 PM IST
Highlights

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ ಕುರಿತಂತೆ ಪ್ರಕ್ರಿಯೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಲಹೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಜು.19]: ಭಾರತ ಕ್ರಿಕೆಟ್ ತಂಡದ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯನ್ನು ಕಪಿಲ್ ದೇವ್ ನೇತೃತ್ವದ ತಾತ್ಕಾಲಿಕ ಸಮಿತಿಯೇ ನಡೆಸಲಿದೆ. ಅಂತಿಮ ನಿರ್ಧಾರವನ್ನೂ ಈ ಸಮಿತಿಯೇ ತೆಗೆದುಕೊಳ್ಳಲಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಸಲಹೆಗಾಗಿ ಕಾಯುತ್ತಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಗಳು ಸ್ಪಷ್ಟಪಡಿಸಿದ್ದಾರೆ.

"

ವನಿತೆಯರ ಟೀಂ ಇಂಡಿಯಾಗೆ ಹಿರ್ವಾನಿ ಸ್ಪಿನ್ ಕೋಚ್

ರವಿಶಾಸ್ತ್ರಿರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳುವ ವೇಳೆ ಕೊಹ್ಲಿ ಅವರ ಸಲಹೆ ಮತ್ತು ಹಾಲಿ ಕೋಚ್ ಅವರ ಒಟ್ಟಾರೆ ಸಾಧನೆಯ ವರದಿ ಪಡೆದುಕೊಳ್ಳಲಾಗಿತ್ತು. ಹೀಗಾಗಿ ಕೆಲವೊಂದು ಗೊಂದಲವೂ ನಿರ್ಮಾಣವಾಗಿತ್ತು. ಅಲ್ಲದೆ, ಈ ಬಾರಿಯೂ ಇದೇ ಗೊಂದಲಕ್ಕೆ ಕಾರಣವಾಗದಂತೆ ಈ ಬಗ್ಗೆ ಸ್ಪಷ್ಟ ನಿಲುವು ತಾಳಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್‌ವಾಡ್ ಮತ್ತು ಶಾಂತಾ ರಂಗಸ್ವಾಮಿ, ಕಪಿಲ್ ದೇವ್ ನೇತೃತ್ವದ ಸಮಿತಿಯಲ್ಲಿರುವ ಇನ್ನಿಬ್ಬರು ಸದಸ್ಯರಾಗಿದ್ದಾರೆ. ಇವರೇ ನೂತಕ ಟೀಂ ಇಂಡಿಯಾ ಕೋಚ್ ನೇಮಕ ಮಾಡಲಿದ್ದಾರೆ. 

click me!