ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನರೇಂದ್ರ ಹಿರ್ವಾನಿ, ಭಾರತ ಮಹಿಳಾ ತಂಡದ ಸ್ಪಿನ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಜು.19): ಭಾರತದ ಮಾಜಿ ಆಟಗಾರ ನರೇಂದ್ರ ಹಿರ್ವಾನಿ, ಭಾರತ ಮಹಿಳಾ ತಂಡದ ಸ್ಪಿನ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಹಿರ್ವಾನಿ ಭಾರತ ಪರ 17 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಸ್ಮೃತಿ ಮಂಧನಾಗೆ 23ನೇ ಹುಟ್ಟು ಹಬ್ಬದ ಸಂಭ್ರಮ
ಸೆಪ್ಟೆಂಬರ್‌ನಲ್ಲಿ ದ.ಆಫ್ರಿಕಾ ತಂಡ, ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ಮಹಿಳಾ ತಂಡದೊಟ್ಟಿಗೆ ನರೇಂದ್ರ ಹಿರ್ವಾನಿ ಕಾರ್ಯ ನಿರ್ವಹಿಸಲಿದ್ದಾರೆ. ಹಿರ್ವಾನಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಯಲ್ಲಿ ಸ್ಪಿನ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಇತ್ತೀಚೆಗಷ್ಟೇ ಬಿಸಿಸಿಐಗೆ ಸ್ಪಿನ್ ಕೋಚ್ ಒಬ್ಬರು ಮಹಿಳಾ ತಂಡಕ್ಕೆ ಅಗತ್ಯವಿದೆ ಎಂದು ಕೇಳಿದ್ದರು. ಹೀಗಾಗಿ ಬಿಸಿಸಿಐ ಹಿರ್ವಾನಿ ಅವರನ್ನು ಸ್ಪಿನ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.