
ನವದೆಹಲಿ(ಜೂ.08]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ಅವರಿಗೆ 2 ಋತುಗಳಿಗೆ ಬಿಸಿಸಿಐನ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ತಂದುಕೊಟ್ಟಿದೆ. ಇದೇ ವೇಳೆ ಮಹಿಳಾ ಕ್ರಿಕೆಟ್ ತಾರೆಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮತಿ ಮಂಧನಾ ಸಹ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಿಸಿಸಿಐ 2016-17, 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟಗೊಳಿಸಿತು. ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ (2016-17, 2017-18)ನಿಗೆ ನೀಡುವ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಜೂನ್ 12ರಂದು ಬೆಂಗಳೂರಲ್ಲಿ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
2016-17ನೇ ಋತುವಿನಲ್ಲಿ 13 ಟೆಸ್ಟ್‌ಗಳಿಂದ 1332 ರನ್ ಗಳಿಸಿದ್ದ ಕೊಹ್ಲಿ, 27 ಏಕದಿನ ಪಂದ್ಯಗಳಲ್ಲಿ 1516 ರನ್ ಕಲೆಹಾಕಿದ್ದರು. 2017-18ರಲ್ಲಿ ಆಡಿದ 6 ಟೆಸ್ಟ್ ಗಳಲ್ಲಿ 896 ರನ್ ಗಳಿಸಿರುವ ವಿರಾಟ್, ಏಕದಿನದಲ್ಲಿ 75.50 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಕೊಹ್ಲಿ ಪ್ರತಿ ಋತುವಿಗೆ ತಲಾ ₹15 ಲಕ್ಷ ಬಹುಮಾನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರೀತ್(2016-17), ಸ್ಮತಿ (2017-18)ರ ಶ್ರೇಷ್ಠ ಆಟಗಾರ್ತಿಯರಾಗಿ ಹೊರಹೊಮ್ಮಿದ್ದಾರೆ. ಬಿಸಿಸಿಐ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟರ್‌ಗಳಿಗೆ ಪ್ರಶಸ್ತಿ ನೀಡುತ್ತಿದ್ದು, ಚೊಚ್ಚಲ ಪ್ರಶಸ್ತಿಗೆ ಭಾಜನರಾಗುತ್ತಿರುವ ಕೀರ್ತಿ ಹರ್ಮನ್, ಸ್ಮತಿದಾಗಿದೆ.
2016-17ರ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ದಿಗ್ಗಜ ಬ್ಯಾಟ್ಸ್‌ಮನ್, ದಿವಂಗತ ಪಂಕಜ್ ರಾಯ್‌ಗೆ ನೀಡಲು ಬಿಸಿಸಿಐ ನಿರ್ಧರಿಸಿದೆ. 2017-18ರ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಅನ್ಶುಮಾನ್ ಗಾಯಕ್ವಾಡ್‌ಗೆ ದೊರೆಯಲಿದೆ.
ಮಯಾಂಕ್‌ಗೆ ಪ್ರಶಸ್ತಿ:
2017-18ರ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಕರ್ನಾಟಕದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಬಾರಿ ದೇಸಿ ಕ್ರಿಕೆಟರ್‌ಗಳಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ಬಿಸಿಸಿಐ ಏರಿಕೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.