ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಾರಾಜಿಸುತ್ತಿದ್ದಾರೆ ವಿರಾಟ್..!

Published : Jun 06, 2018, 06:38 PM ISTUpdated : Jun 06, 2018, 06:45 PM IST
ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಾರಾಜಿಸುತ್ತಿದ್ದಾರೆ ವಿರಾಟ್..!

ಸಾರಾಂಶ

ದೆಹಲಿಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಅನಾವರಣ ಬ್ಯಾಟ್ ಹಿಡಿದು ಕಂಗಳಲ್ಲೇ ಬೌಲರ್‌ಗೆ ನಡುಕ ಹುಟ್ಟಿಸುವ ಶೈಲಿಯ ವಿರಾಟ್ ಮೇಣದ ಪ್ರತಿಮೆ  ಈ ಅಪರೂಪದ ಗೌರವ ನೀಡಿದ ಟುಸ್ಸಾಡ್ಸ್ ಮ್ಯೂಸಿಯಂಗೆ ವಿರಾಟ್ ಅಭಿನಂದನೆ

ನವದೆಹಲಿ(ಜೂ.6): ಜಗತ್ತಿನ ಖ್ಯಾತನಾಮರಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಈಗಗಾಲೇ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕ್ರಿಕೆಟ್‌ ದಿಗ್ಗಜರಾದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ಈಗ ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿ, 'ನನ್ನ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ದೊಡ್ಡ ಗೌರವ. ಜೀವಮಾನದ ನೆನಪಿಗಾಗಿ ಮೇಡಮ್ ಟುಸ್ಸಾಡ್ಸ್‌ಗೆ ಕೃತಜ್ಞತೆಗಳು,' ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಲಂಡನ್ ನಿಂದ ದೆಹಲಿ ಆಗಮಿಸಿದ್ದ ಪರಿಣತ ಕಲಾವಿದರ ತಂಡ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ನಿರ್ಮಿಸಿದೆ. ಇದಕ್ಕಾಗಿ ವಿರಾಟ್‌ ಅವರ ದೇಹದ 200 ನಿರ್ದಿಷ್ಟ ಅಳತೆಗಳು ಹಾಗೂ ಚಿತ್ರಗಳನ್ನು ಈ ತಂಡ ಪಡೆದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?