ಟಿ20 ಯಿಂದ ಧೋನಿ ಡ್ರಾಪ್- ಕಾರಣ ಬಹಿರಂಗ ಪಡಿಸಿದ ಕೊಹ್ಲಿ!

By Web DeskFirst Published Nov 1, 2018, 10:23 PM IST
Highlights

ಟಿ20 ಮಾದರಿಯಿಂದ ಎಂ.ಎಸ್ ಧೋನಿಯನ್ನ ಕೈಬಿಟ್ಟು, ಯುವ ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಅವಕಾಶ ನೀಡಲಾಗಿದೆ. ಧೋನಿಯನ್ನ ಡ್ರಾಪ್ ಮಾಡಿರೋದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಾಯಕ ವಿರಾಟ್ ಕೊಹ್ಲಿ ಧೋನಿ ಡ್ರಾಪ್ ಹಿಂದಿನ ಸತ್ಯವನ್ನ ಬಹಿರಂಗ ಪಡಿಸಿದ್ದಾರೆ.

ತಿರುವನಂತಪುರಂ(ನ.01): ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು. ಸರಣಿ ಗೆಲುವಿನ ಸಂಭ್ರಮಕ್ಕಿಂತ ವಿರಾಟ್ ಕೊಹ್ಲಿ ಟಿ20 ಮಾದರಿಯಿಂದ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ಕೈಬಿಟ್ಟಿರುವುದೇಕೆ ಅನ್ನೋ ಪ್ರಶ್ನೆಗಳನ್ನ ಎದುರಿಸಬೇಕಾಯಿತು.

ಟಿ20 ಆಯ್ಕೆ ಬಳಿಕ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಧೋನಿ ಡ್ರಾಪ್ ಹಿಂದಿನ ಸತ್ಯವನ್ನ ಬಹಿರಂಗಪಡಿಸಿದ್ದಾರೆ. ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡಲು ಟಿ20 ಮಾದರಿಯಿಂದ ಧೋನಿಯನ್ನ ಹೊರಗಿಡಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಧೋನಿ ಟೀಂ ಇಂಡಿಯಾದ ಸದಸ್ಯ. ಟಿ20ಯಿಂದ ಹೊರಗುಳಿದಿರುವ ಧೋನಿ ಏಕದಿನ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ. ಟೆಸ್ಟ್‌ನಲ್ಲಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸೋ ರಿಷಬ್ ಪಂತ್, ನಿಗಧಿತ ಓವರ್ ಕ್ರಿಕೆಟ್‌ನಲ್ಲೂ ಅವಕಾಶ ಬೇಕಿದೆ.  ಈ ವಿಚಾರವನ್ನ ಆಯ್ಕೆ ಸಮಿತಿ ಈಗಾಗಲೇ ಹೇಳಿದೆ. ಹೀಗಾಗಿ ನಾನು ಈ ಕುರಿತು ಹೆಚ್ಚೇನು ಹೇಳುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

click me!