ಬೆಂಗಾಲ್ ವಾರಿಯರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್‌ಗೆ ಗೆಲುವು!

By Web DeskFirst Published Nov 1, 2018, 9:32 PM IST
Highlights

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿತು. ಲೋ ಸ್ಕೋರಿಂಗ್ ಗೇಮ್ ಅಭಿಮಾನಿಗಳ ಕುತೂಹಲ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯ್ತು. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಬಿಹಾರ(ನ.01): ಪ್ರೊ ಕಬ್ಡಡಿ ಲೀಗ್ ಟೂರ್ನಿಯ 43ನೇ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮಖಿಯಾಯಿತು. ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 29-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಬೆಂಗಾಲ್ ವಾರಿಯರ್ಸ್ ಅಂಕ ಖಾತೆ ತೆರೆದು ಆರಂಭಿಕ 7 ನಿಮಿಷದ ವರೆಗೆ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ನಿಧಾನವಾಗಿ ಚೇತರಿಸಿಕೊಂಡ ಪಾಟ್ನಾ ಅಂಕಗಳಿಕೆ ವೇಗ ಹೆಚ್ಚಿಸಿತು. ಹೀಗಾಗಿ ಮೊದಲಾರ್ಧದಲ್ಲಿ 15-12 ಅಂತರದ ಮುನ್ನಡೆ ಕಾಯ್ದುಕೊಂಡಿತು.

ದ್ವಿತೀಯಾರ್ಧದಲ್ಲಿ ಬೆಂಗಾಲ್ ಮುನ್ನಡೆಗಾಗಿ ಕಠಿಣ ಹೋರಾಟ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. ದೀಪಕ್ ನರ್ವಾಲ್ 7 ರೈಡ್ ಅಂಕಗಳೊಂದಿಗೆ ಪಾಟ್ನಾ ಅಂತಿಮ ಹಂತದಲ್ಲಿ 29-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

click me!