ಆಪ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಗೌತಮ್ ಗಂಭೀರ್!

By Web DeskFirst Published Nov 1, 2018, 7:35 PM IST
Highlights

ದೆಹಲಿಯ ವಾಯು ಮಾಲಿನ್ಯ ಸಮಸ್ಯೆ ಬಿಗಡಾಯಿಸಿದೆ. ಜನರು ಉಸಿರಾಡಲು ಕನಿಷ್ಠ ಸ್ವಚ್ಚದ ಗಾಳಿಯೂ ಇಲ್ಲದಾಗಿದೆ. ಇದೀಗ ದೆಹಲಿ ಮಾಲಿನ್ಯದ ಕುರಿತು ಕ್ರಿಕೆಟಿಗ ಗೌತಮ್ ಗಂಭೀರ್, ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ(ನ.01): ದೆಹಲಿ ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹಳೇ ಕಾರುಗಳ ನಿಷೇಧ, ಖಾಸಗಿ ಕಾರು ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಕ್ರಮಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಆದರೆ ಇಷ್ಟು ದಿನ ಸರ್ಕಾರ ಏನು ಮಾಡುತ್ತಿದೆ ಅನ್ನೋ ಪ್ರಶ್ನೆ ಎದ್ದಿದೆ.

ಮಾಲಿನ್ಯ ನಿಯಂತ್ರಿಸಲು ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ವಿಫಲವಾಗಿದೆ ಅನ್ನೋ ಕೂಗು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ದೆಹಲಿ ವಾಯು ಮಾಲಿನ್ಯ ವಿರುದ್ಧ ಗುಡುಗಿದ್ದಾರೆ.

 

“दर्दे दिल, दर्दे जिगर दिल्ली में जगाया AAP ने, पहले तो यहाँ Oxygen था, Oxygen भगाया AAP ने।” our generations are going up in smoke like your false promises. U had 1 full year to tame dengue &pollution, sadly you couldn’t control either. Wake up!!! pic.twitter.com/xePi5mubO5

— Gautam Gambhir (@GautamGambhir)

 

ದೆಹಲಿಯಲ್ಲಿ ಡೆಂಗ್ಯೂ ಮಾರಕ ರೋಗ ಹಾಗೂ ಮಾಲಿನ್ಯ ತಡೆಗಟ್ಟಲು ಆಮ್ ಆದ್ಮಿ ಸರ್ಕಾರಕ್ಕೆ ಸಂಪೂರ್ಣ ಒಂದು ವರ್ಷ ಸಮಯವಿತ್ತು. ಆದರೆ ಡೆಂಗ್ಯೂ ಆಗಲಿ, ಮಾಲಿನ್ಯವಾಗಲಿ ತಡೆಗಟ್ಟಲು ಸಾಧ್ಯವಾಗಿಲ್ಲ. ನಮ್ಮ ಪೀಳಿಗೆ ಸುಳ್ಳು ಭರವಸೆಗಳನ್ನ ಉಸಿರಾಡಿದ್ದೇ ಬಂತು ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
 

click me!