ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 250 ರನ್’ಗಳಿಗೆ ಸರ್ವಪತನ ಕಂಡಿತು, ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಪ್ರವಾಸಿ ಆಸ್ಟ್ರೇಲಿಯಾ ಕೇವಲ 242 ರನ್’ಗಳಿಗೆ ಆಲೌಟ್ ಆಗುವ ಮೂಲಕ ಆಘಾತಕಾರಿ ಸೋಲು ಕಂಡಿತು. ಈ ಬಗ್ಗೆ ಕೊಹ್ಲಿ ಮನಬಿಚ್ಚಿ ಹೇಳಿದ್ದಿಷ್ಟು...
ನಾಗ್ಪುರ[ಮಾ.06]: ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವಿರಾಟ್ ಪಡೆ ಕೊನೆಯ ಓವರ್’ನಲ್ಲಿ ರೋಚಕ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇಂಡೋ-ಆಸಿಸ್ 2ನೇ ಏಕದಿನ: ಅಂತಿಮ ಓವರ್‌ನಲ್ಲಿ ಭಾರತಕ್ಕೆ ಗೆಲುವು!
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 250 ರನ್’ಗಳಿಗೆ ಸರ್ವಪತನ ಕಂಡಿತು, ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಪ್ರವಾಸಿ ಆಸ್ಟ್ರೇಲಿಯಾ ಕೇವಲ 242 ರನ್’ಗಳಿಗೆ ಆಲೌಟ್ ಆಗುವ ಮೂಲಕ ಆಘಾತಕಾರಿ ಸೋಲು ಕಂಡಿತು. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಕೊಹ್ಲಿ, ಈ ಪಂದ್ಯದ ಗೆಲುವು ನಮ್ಮಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿಶ್ವಕಪ್ ಟೂರ್ನಿಯಲ್ಲೂ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವುದು ಮಹತ್ವದ ಪಾತ್ರವಹಿಸುತ್ತದೆ ವಿಶ್ವಕಪ್ ಟೂರ್ನಿಯಲ್ಲೂ ಕಡಿಮೆ ಮೊತ್ತ ಬಾರಿಸಿದರೂ ಕೊನೆಯ ಕ್ಷಣದವರೆಗೂ ಹೋರಾಟ ಮಾಡಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಕೊಹ್ಲಿ ಹೇಳಿದ್ದಾರೆ.
40ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!
ಮೊದಲ ಓವರ್’ನಲ್ಲೇ ರೋಹಿತ್ ಶರ್ಮಾ ಶೂನ್ಯ ಸುತ್ತಿದ ಬಳಿಕ ಸಂಕಷ್ಟಕ್ಕೆ ಒಳಗಾಗಿದ್ದ ಭಾರತಕ್ಕೆ ಕೊಹ್ಲಿ ಹಾಗೂ ವಿಜಯ್ ಶಂಕರ್ ಆಸರೆಯಾದರು. ಅದರಲ್ಲೂ ಪಂದ್ಯದುದ್ಧಕ್ಕೂ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ 120 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 116 ರನ್ ಬಾರಿಸಿದರು. ಇನ್ನು 40ನೇ ಶತಕದ ಬಗ್ಗೆ ಮಾತನಾಡಿದ ಕೊಹ್ಲಿ, ದೇಶದ ಪರವಾಗಿ ಆಡುವುದೇ ಒಂದು ಹೆಮ್ಮೆ. ನನ್ನ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ಹೇಳಿದರು.
ಇನ್ನು ಭಾರತೀಯ ಬೌಲರ್’ಗಳನ್ನು ಕೊಂಡಾಡಿದ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ವಿಜಯ್ ಶಂಕರ್’ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ವಿಜಯ್ ಶಂಕರ್ ಕೊನೆಯ ಓವರ್’ನಲ್ಲಿ ಸರಿಯಾದ ಲೈನ್ ಲೆಂಗ್ತ್’ನಲ್ಲಿ ದಾಳಿ ನಡೆಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ತಂಡಕ್ಕೆ ನೆರವಾದರು. ಇನ್ನು ಬುಮ್ರಾ ಅಂತೂ ಚಾಂಪಿಯನ್ ಬೌಲರ್. ಪಂದ್ಯವನ್ನು ನಮ್ಮ ಕಡೆ ವಾಲುವಂತೆ ಮಾಡಲು ಅವರು ಯಶಸ್ವಿಯಾದರು. ಬುಮ್ರಾ ನಮ್ಮ ತಂಡದಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಕೊನೆಯ 2 ಓವರ್’ಗಳಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು. ಆಸ್ಟ್ರೇಲಿಯಾ ಪಂದ್ಯ ಗೆಲ್ಲಲು ಕೊನೆಯ ಓವರ್’ನಲ್ಲಿ 11 ರನ್’ಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಹೊಣೆಹೊತ್ತ ವಿಜಯ್ ಶಂಕರ್ ಕೇವಲ 2 ರನ್ ನೀಡಿ ಕೊನೆಯ ಎರಡು ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ರೋಚಕ ಗೆಲುವು ತಂದಿತ್ತರು.