ವಿರಾಟ್ ಕೊಹ್ಲಿ ಯಾವತ್ತೂ ಕೂಲ್ ಕೂಲ್; ಪತ್ನಿ ಅನುಷ್ಕಾ ಸರ್ಟಿಫಿಕೇಟ್!

By Web Desk  |  First Published Jul 31, 2019, 12:42 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಥಹ ಅಗ್ರೆಸ್ಸೀವ್ ಕ್ರಿಕೆಟರ್ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಮೈದಾನದಲ್ಲಿ ಕೊಹ್ಲಿ ಆಕ್ರಮಣಕಾರಿ ಮನೋಭಾವದಿಂದಲೇ ಹೋರಾಡುತ್ತಾರೆ. ಆದರೆ ಮನೆಯಲ್ಲಿ ಕೊಹ್ಲಿ ಹೇಗಿರುತ್ತಾರೆ ಅನ್ನೋದನ್ನು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಹಿರಂಗ ಪಡಿಸಿದ್ದಾರೆ. 


ಮುಂಬೈ(ಜು.31): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ಕ್ರಿಕೆಟಿಗ. ವಿಶ್ವಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಕ್ರಿಕೆಟಿಗರಲ್ಲಿ ಕೊಹ್ಲಿಗೆ ಮೊದಲನೇ ಸ್ಥಾನ. ಸೌರವ್ ಗಂಗೂಲಿ ಬಳಿಕ ಭಾರತ ಕಂಡ ಅಗ್ರೆಸ್ಸೀವ್ ನಾಯಕ ಅನ್ನೋ ಖ್ಯಾತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇದೀಗ ಕೊಹ್ಲಿ ವೈಯುಕ್ತಿಕ ಜೀವನದಲ್ಲಿ ಹೇಗಿರುತ್ತಾರೆ ಎಂದು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಜಿಮ್‌ ವರ್ಕೌಟ್‌ನಲ್ಲಿ ಕೊಹ್ಲಿಯನ್ನು ಮೀರಿಸಿದ ಅನುಷ್ಕಾ!

Tap to resize

Latest Videos

ವೈಯುಕ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ ತುಂಬಾ ಕೂಲ್. ಯಾವುತ್ತೂ ಆಕ್ರಮಣಕಾರಿಯಾಗಿ ವರ್ತಿಸಿಲ್ಲ. ನನ್ನ ಜೀವನದಲ್ಲಿ ಬೇಟಿಯಾದ ಅತ್ಯಂತ ಶಾಂತ ವ್ಯಕ್ತಿ ಎಂದು ಅನುಷ್ಕಾ ಬಣ್ಣಿಸಿದ್ದಾರೆ. ಈ ಮೂಲಕ  ಆಫ್ ದಿ ಫೀಲ್ಡ್‌ನಲ್ಲಿ ಕೊಹ್ಲಿ ವ್ಯಕ್ತಿತ್ವವನ್ನು ಬಹರಂಗ ಮಾಡಿದ್ದಾರೆ. 

ಇದನ್ನೂ ಓದಿ: ಅನುಷ್ಕಾ ಬರ್ತಡೇಗೆ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ ವಿರಾಟ್!

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಅಮೆರಿಕದಲ್ಲಿ ಬೀಡುಬಿಟ್ಟಿದೆ. ವಿಂಡೀಸ್ ವಿರುದ್ಧ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯ ಆಡಲಿದೆ. 

click me!