ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 6 ದಾಖಲೆ

By Web Desk  |  First Published Jul 31, 2019, 11:19 AM IST

ಕರ್ನಾಟಕ ಈಜುಪಟುಗಳು ಹಿರಿಯರ ಈಜು ಕೂಟದಲ್ಲಿ ಮೊದಲ ದಿನವೇ ದಾಖಲೆ ಬರೆದಿದೆ. ಶ್ರೀಹರಿ ನಟರಾಜು, ತನೀಶ್, ರಕ್ಷಿತ್ ಸೇರಿದಂತೆ ಕರ್ನಾಟಕ ಈಜುಪಟುಗಳು ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.


ಬೆಂಗಳೂರು(ಜು.31): ಕರ್ನಾಟಕದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜು, ಲಿಖಿತ್‌ ಹಾಗೂ ಸುವಾನ ಸಿ. ಭಾಸ್ಕರ್‌, ಇಲ್ಲಿ ಮಂಗಳವಾರದಿಂದ ಆರಂಭವಾಗಿರುವ ರಾಜ್ಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದೊಂದಿಗೆ ದಾಖಲೆ ನಿರ್ಮಿಸಿದ್ದಾರೆ. ಮೊದಲ ದಿನವೇ 6 ಕೂಟ ದಾಖಲೆಗಳು ಮೂಡಿ ಬಂದಿವೆ. 

ಇದನ್ನೂ ಓದಿ: ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್‌

Tap to resize

Latest Videos

ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೊಕ್‌ನಲ್ಲಿ ಲಖಿತ್‌ 1 ನಿಮಿಷ 04.34 ಸೆ.ಗಳಲ್ಲಿ ಗುರಿ ಮುಟ್ಟಿದರು. 200 ಮೀನಲ್ಲಿ  ಶ್ರೀಹರಿ ನಟರಾಜು 2 ನಿಮಿಷ 06.90 ಸೆ.ಗಳಲ್ಲಿ ಗುರಿ ತಲುಪಿದರು. 400 ಮೀ. ಮೆಡ್ಲೆಯಲ್ಲಿ ಶಿವಾ ಎಸ್‌. 4 ನಿಮಿಷ 36.37 ಸೆ.ಗಳಲ್ಲಿ ಗುರಿ ತಲುಪಿದರು. 50 ಮೀ. ಬಟರ್‌ಫ್ಲೈನಲ್ಲಿ ರಕ್ಷಿತ್‌ ಯು ಶೆಟ್ಟಿ25.61 ಸೆ.ಗಳಲ್ಲಿ ಗುರಿ ಮುಟ್ಟಿದರು. 

4/100 ಮೀ. ಫ್ರೀಸ್ಟೈಲ್‌ನಲ್ಲಿ ತನೀಶ್‌, ರಕ್ಷಿತ್‌, ಸಂಭವ್‌, ಶ್ರೀಹರಿ ಅವರಿದ್ದ ತಂಡ 3 ನಿಮಿಷ 35.94 ಸೆ.ಗಳಲ್ಲಿ ಗುರಿ ತಲುಪಿತು. ಮಹಿಳೆಯರ 200 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಸುವಾನ ಸಿ. ಭಾಸ್ಕರ್‌ 2 ನಿಮಿಷ 25.97 ಸೆ.ಗಳಲ್ಲಿ ಗುರಿ ಮುಟ್ಟುವ ಮೂಲಕ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು.

click me!