
ಡೆನ್ಮಾರ್ಕ್(ಜು.31): ಐಪಿಎಲ್ ಟೂರ್ನಿ ಯಶಸ್ಸಿನ ಬಳಿಕ ಪ್ರತಿ ಕ್ರಿಕೆಟ್ ರಾಷ್ಟ್ರದಲ್ಲಿ ತಮ್ಮದೇ ಆದ ಕ್ರಿಕೆಟ್ ಲೀಗ್ ಟೂರ್ನಿ ಸಕ್ರಿಯವಾಗಿದೆ. ಇಷ್ಟಕ್ಕೇ ಲೀಗ್ ಟೂರ್ನಿ ಸೀಮಿತವಾಗಿಲ್ಲ, ಕ್ರಿಕೆಟ್ ಆಡದ ದೇಶಗಳು ಕೂಡ ಇದೀಗ ಲೀಗ್ ಟೂರ್ನಿ ಆಯೋಜಿಸುತ್ತಿದೆ. ಯುರೋಪಿಯನ್ ಕ್ರಿಕೆಟ್ ಲೀಗ್ ಇದಕ್ಕೆ ಹೊಸ ಸೇರ್ಪಡೆ. ಈ ಟೂರ್ನಿಯಲ್ಲಿ ರೋಮೆನಿಯಾದ ಬೌಲರ್ ಅತ್ಯಂತ ಕೆಟ್ಟ ಬೌಲಿಂಗ್ ಶೈಲಿಯಿಂದ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ಕೊಹ್ಲಿ ನಾಯಕತ್ವ ಪ್ರಶ್ನಿಸಿದ್ದ ಗವಾಸ್ಕರ್‌ಗೆ ಮಂಜ್ರೇಕರ್ ತಿರುಗೇಟು!
40 ವರ್ಷದ ಪಾವೆಲ್ ಫ್ಲೋರಿನ್ ಕೆಟ್ಟ ಶೈಲಿಯಲ್ಲಿ ಬೌಲಿಂಗ್ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶಿಷ್ಠ ಬೌಲಿಂಗ್ ಶೈಲಿಯಿಂದ ಹಲವರು ಗಮನಸೆಳೆದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕೆಟ್ಟ ಬೌಲಿಂಗ್ ಶೈಲಿ ಕ್ರಿಕೆಟ್‌ನಲ್ಲಿ ವೈರಲ್ ಆಗಿದೆ. ಪಾವೆಲ್ ಫ್ಲೋರಿನ್ 32ನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ. ಸದ್ಯ ಫ್ಲೊರಿನ್ ವಯಸ್ಸು 40.
ಇದನ್ನೂ ಓದಿ: ಭಾರತ-ವೆಸ್ಟ್ ಇಂಡೀಸ್ ಸರಣಿ: ಅಮೆರಿಕ ತಲುಪಿದ ಟೀಮ್ ಇಂಡಿಯಾ!
ಕೆಟ್ಟ ಬೌಲಿಂಗ್ ಶೈಲಿ ಕುರಿತು ಪಾವೆಲ್ ಫ್ಲೋರಿನ್ ಪ್ರತಿಕ್ರಿಯಿಸಿದ್ದಾರೆ. ನನ್ನ ಬೌಲಿಂಗ್ ಶೈಲಿ ಕೆಟ್ಟದಾಗಿದೆ. ಎಲ್ಲರೂ ನನ್ನ ಶೈಲಿಯನ್ನು ಟೀಕಿಸಿದ್ದಾರೆ. ಆದರೆ ನಾನು ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾರಣ ಬೌಲಿಂಗ್ ಶೈಲಿ ಉತ್ತಮವಾಗಿಲ್ಲ ಎಂದು ನನಗೆ ತಿಳಿದಿದೆ. ಇಷ್ಟೇ ಅಲ್ಲ ನನಗೆ ಕ್ರಿಕೆಟ್ ಇಷ್ಟ. ಹೀಗಾಗಿ ಇದ್ಯಾವುದು ಪರಿಗಣಿಸುವುದಿಲ್ಲ ಎಂದು ಫ್ಲೋರಿನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.