ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್ ಸೋಲಿನ ಬೆನ್ನಲ್ಲೇ ಆಸಿಸ್ ನಾಯಕ ಟಿಮ್ ಪೈನ್ ಅವರೊಂದಿಗೆ ವಿರಾಟ್ ಹಸ್ತಲಾಘನ ಮಾಡಿರಲಿಲ್ಲ. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ ಕೋಚ್ ರವಿಶಾಸ್ತ್ರಿ ವಿರಾಟ್ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಮೆಲ್ಬರ್ನ್[ಡಿ.25]: ಆಸ್ಪ್ರೇಲಿಯಾದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ‘ಅತ್ಯುತ್ತಮ ನಾಯಕ’ ಎಂದು ಕೊಂಡಾಡಿದ್ದಾರೆ.
‘ನಾನು ಕೊಹ್ಲಿ ಜತೆ ಒಂದೆರಡು ಐಪಿಎಲ್ ಆವೃತ್ತಿಗಳಲ್ಲಿ ಡ್ರೆಸ್ಸಿಂಗ್ ಕೋಣೆ ಹಂಚಿಕೊಂಡಿದ್ದೇನೆ. ಅವರೊಬ್ಬ ಅತ್ಯುತ್ತಮ ನಾಯಕ. ಜತೆಗೆ ಅಷ್ಟೇ ಅತ್ಯುತ್ತಮ ಆಟಗಾರ ಕೂಡ. ಭಾರತೀಯರು ಈ ಸರಣಿಯಲ್ಲಿ ಆಡುತ್ತಿರುವ ರೀತಿ ಖಂಡಿತವಾಗಿಯೂ ಅವರ ಮೇಲೆ ಗೌರವ ಹೆಚ್ಚುವಂತೆ ಮಾಡಿದೆ’ ಎಂದು ಸ್ಟಾರ್ಕ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್ ಸೋಲಿನ ಬೆನ್ನಲ್ಲೇ ಆಸಿಸ್ ನಾಯಕ ಟಿಮ್ ಪೈನ್ ಅವರೊಂದಿಗೆ ವಿರಾಟ್ ಹಸ್ತಲಾಘನ ಮಾಡಿರಲಿಲ್ಲ. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ ಕೋಚ್ ರವಿಶಾಸ್ತ್ರಿ ವಿರಾಟ್ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಆಸಿಸ್ ODIs,T20 ಸರಣಿಗೆ ಟೀಂ ಇಂಡಿಯಾ ಪ್ರಕಟ!
ಮಿಚೆಲ್ ಸ್ಟಾರ್ಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2014ರಲ್ಲಿ ಖರೀದಿಸಿತ್ತು. ಕಳೆದ ಫೆಬ್ರವರಿವರೆಗೂ ಆರ್’ಸಿಬಿ ತಂಡದ ಭಾಗವಾಗಿದ್ದ ಸ್ಟಾರ್ಕ್ ಅವರನ್ನು 2018ರ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಐಪಿಎಲ್’ನಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ.