ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿರುವ ಆಸ್ಟ್ರೇಲಿಯಾ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್ ಮತ್ತು ಜೋಸ್ ಹ್ಯಾಜಲ್’ವುಡ್ ಜತೆಗೆ ಮಿಚೆಲ್ ಮಾರ್ಷ್ ಕೂಡ ಬೌಲಿಂಗ್’ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ಮೆಲ್ಬರ್ನ್[ಡಿ.25]: ಭಾರತ ವಿರುದ್ಧದ ಮೆಲ್ಬರ್ನ್ ಟೆಸ್ಟ್’ಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಆತಿಥೇಯ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಬಹುತೇಕ ಪರ್ತ್ ಟೆಸ್ಟ್’ನ ಗೆಲುವಿನ ತಂಡದೊಂದಿಗೆ ಆಸ್ಟ್ರೇಲಿಯಾ ಕಣಕ್ಕಿಳಿಯುತ್ತಿದ್ದು, ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಪೀಟರ್ ಹ್ಯಾಂಡ್ಸ್’ಕಂಬ್ ಅವರನ್ನು ಕೈಬಿಟ್ಟು, ಮಿಚೆಲ್ ಮಾರ್ಷ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹ್ಯಾಂಡ್ಸ್’ಕಂಬ್ 4 ಇನ್ನಿಂಗ್ಸ್’ಗಳಲ್ಲಿ ಕೇವಲ 68 ರನ್ ಬಾರಿಸಿದ್ದಾರೆ. ಮೊದಲೆರಡು ಟೆಸ್ಟ್’ಗಳಿಂದ ಹೊರಗುಳಿದಿದ್ದ ಮಾರ್ಷ್ ಇದೀಗ ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಕಣಕ್ಕಿಳಿಯಲಿದ್ದಾರೆ.
undefined
ಮೆಲ್ಬರ್ನ್ ಟೆಸ್ಟ್’ಗೆ ಟೀಂ ಇಂಡಿಯಾ ಪ್ರಕಟ: 2 ಬದಲಾವಣೆ
ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿರುವ ಆಸ್ಟ್ರೇಲಿಯಾ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್ ಮತ್ತು ಜೋಸ್ ಹ್ಯಾಜಲ್’ವುಡ್ ಜತೆಗೆ ಮಿಚೆಲ್ ಮಾರ್ಷ್ ಕೂಡ ಬೌಲಿಂಗ್’ನಲ್ಲಿ ತಂಡಕ್ಕೆ ನೆರವಾಗಬಲ್ಲರು.
ಪರ್ತ್ ಟೆಸ್ಟ್’ನಲ್ಲಿ ಗಾಯಕ್ಕೆ ತುತ್ತಾಗಿದ್ದ ಆ್ಯರೋನ್ ಫಿಂಚ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಮಾರ್ಕಸ್ ಹ್ಯಾರಿಸ್ ಜತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪರ್ತ್ ಟೆಸ್ಟ್’ನಲ್ಲಿ ವಿಫಲವಾಗಿದ್ದ ಟ್ರಾವಿಸ್ ಹೆಡ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಉಸ್ಮಾನ್ ಖ್ವಾಜಾ ಹಾಗೂ ಶಾನ್ ಮಾರ್ಷ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.
4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಇದೀಗ ಮೆಲ್ಬರ್ನ್ ಟೆಸ್ಟ್ ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ತಂಡ ಹೀಗಿದೆ:
ಆ್ಯರೋನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಪೈನೆ[ನಾಯಕ], ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಸ್ ಹ್ಯಾಜಲ್’ವುಡ್.