2019 ಐಪಿಎಲ್ ಟೂರ್ನಿ ಆಡಲ್ಲ ಟೀಂ ಇಂಡಿಯಾ ಬೌಲರ್ಸ್?

By Web DeskFirst Published Nov 8, 2018, 11:59 AM IST
Highlights

2019ರ ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಒಂದೆಡೆ ಟೂರ್ನಿ ಎಲ್ಲಿ ಆಯೋಜಿಸಬೇಕು ಅನ್ನೋದೆ ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರೇ ಐಪಿಎಲ್ ಟೂರ್ನಿಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

ಮುಂಬೈ(ನ.08): 2019ರ ಐಪಿಎಲ್ ಆಯೋಜನೆಗೆ ಬಿಸಿಸಿಐ ಹೆಣಗಾಡುತ್ತಿದೆ. ಒಂದೆಡೆ ಲೋಕಸಭಾ ಚುನಾವಣೆ ಮತ್ತೊಂದೆಡೆ ವಿಶ್ವಕಪ್ ಟೂರ್ನಿ. ಹೀಗಾಗಿ 12ನೇ ಆವೃತ್ತಿ ಐಪಿಎಲ್ ಟೂರ್ನಿ ಯುಎಇ ಅಥವಾ ಸೌತ್ಆಫ್ರಿಕಾದಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ.

ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿದ್ದರೆ, ಮುಂಬರುವ ಐಪಿಎಲ್‌ನಲ್ಲಿ ಆಟಗಾರರ ಪಾಲ್ಗೊಳ್ಳುವಿಕೆ ಕೂಡ ಅತೀ ದೊಡ್ಡ ಚಾಲೆಂಜ್ ಆಗಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಸಂಪೂರ್ಣ ಐಪಿಎಲ್ ಟೂರ್ನಿಗೆ ಲಭ್ಯವಿರೋದಿಲ್ಲ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಪ್ರಮುಖ ಬೌಲರ್‌ಗಳು ಕೂಡ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ.

2019ರ ವಿಶ್ವಕಪ್ ಆಡೋ ಟೀಂ ಇಂಡಿಯಾ ಪ್ರಮುಖ ಬೌಲರ್‌ಗಳು ಐಪಿಎಲ್ ಟೂರ್ನಿಯಿಂದ ದೂರ ಉಳಿಯಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೂಚಿಸಿದ್ದಾರೆ. ಐಪಿಎಲ್ ಟೂರ್ನಿ ಮುಗಿದ 10 ದಿನಗಳಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದರಿಂದ ಬೌಲರ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಸಿಗುವುದಿಲ್ಲ. ಐಪಿಎಲ್ ಟೂರ್ನಿಯಿಂದ ದೂರ ಉಳಿದರೆ ವಿಶ್ವಕಪ್ ಟೂರ್ನಿಯಲ್ಲಿ ಇಂಜುರಿ ಅಥವಾ ಇನ್ಯಾವ ಸಮಸ್ಯೆ ಎದುರಾಗಲ್ಲ ಎಂದು ಕೊಹ್ಲಿ ಹೇಳಿದ್ದಾರೆ. 

ಸುಪ್ರೀಂ ಕೋರ್ಟ್ ನೇಮಸಿದ ಬಿಸಿಸಿಐ ಆಡಳಿತ ಸಮಿತಿ ಕೂಡ ಆಟಗಾರರಿಗೆ ವಿಶ್ರಾಂತಿ ನೀಡಲು ಸೂಚಿಸಿದೆ. ಅದರಲ್ಲೂ ವೇಗಿ ಜಸ್‌ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ ನೀಡಲು ಸಿಓಎ ಸೂಚಿಸಿದೆ. ಆದರೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಇದರ ಬೆನ್ನಲ್ಲೇ ಕೊಹ್ಲಿ ಕೂಡ ವೇಗಿಗಳು ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯಲು ಸೂಚಿಸಿದ್ದಾರೆ. ಇದು ಅಂತಿಮವಾದರೆ ಐಪಿಎಲ್ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಕಾರಣ ಮುಂಬೈ ಇಂಡಿಯನ್ಸ್ ಜಸ್‌ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಸೇವೆ ಕಳೆದುಕೊಳ್ಳಲಿದೆ. 

click me!