ವಿರಾಟ್ ಕೊಹ್ಲಿ ಹೇಳಿಕೆಗೆ ಗರಂ ಆದ ಬಿಸಿಸಿಐ!

By Web DeskFirst Published Nov 8, 2018, 10:58 AM IST
Highlights

ಅಭಿಮಾನಿಗೆ ದೇಶ ಬಿಟ್ಟು ತೊಲಗಲು ಹೇಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗ ಭಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ಕೊಹ್ಲಿ ಹೇಳಿಕೆಗೆ ಗರಂ ಆಗಿದೆ.

ಮುಂಬೈ(ನ.08): ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿ  ವಿವಾದಕ್ಕೆ ಕಾರಣವಾಗಿದ್ದಾರೆ. ಕೊಹ್ಲಿ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇದೀಗ ಬಿಸಿಸಿಐ ಗರಂ ಆಗಿದೆ. 

ಇದನ್ನೂ ಓದಿ: ಇಷ್ಟವಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದ ಕೊಹ್ಲಿಗೆ ಫುಲ್ ಕ್ಲಾಸ್!

ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟಿಗರಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರೇ ಹೆಚ್ಚು ಇಷ್ಟ ಆಗುತ್ತಾರೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿದ ಕೊಹ್ಲಿ, ಇತರ ದೇಶ ಹಾಗೂ ಕ್ರಿಕೆಟಿಗರನ್ನ ಪ್ರೀತಿಸುವುದಾದರೆ ದೇಶ ಬಿಟ್ಟು ತೊಲುಗುವುದ ಸೂಕ್ತ ಎಂದಿದ್ದರು. ಇದೀಗ ಈ ಹೇಳಿಕೆ ಬಿಸಿಸಿಐ ಕಣ್ಣು ಕಂಪಾಗಿಸಿದೆ ಎಂದು ಕ್ರಿಕೆಟ್ ಕಂಟ್ರಿ ವೆಬ್‌ಸೈಟ್ ವರದಿ ಮಾಡಿದೆ.

ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯನ್ನ ಬಿಸಿಸಿಐ ಗೌರವಿಸುತ್ತದೆ. ಅವರ ಆಯ್ಕೆ, ಪ್ರೀತಿ ಏನೇ ಇರಬಹುದು, ಅದನ್ನ ಗೌರವಿಸಬೇಕು. ಅಭಿಮಾನಿ ಇಲ್ಲದಿದ್ದರೆ, ಕೊಹ್ಲಿಯ 100 ಕೋಟಿ ಮೌಲ್ಯದ ಪುಮಾ ಎಂಡೋರ್ಸ್‌ಮೆಂಟ್ ಸಾಧ್ಯವಾಗುತ್ತಿರಲಿಲ್ಲ. ಅಭಿಮಾನಿ ಇಲ್ಲದಿದ್ದರೆ, ಕ್ರಿಕೆಟಿಗರಿಗೆ ಸಂಭಾವನೇ ಇರುತ್ತಿರಲಿಲ್ಲ. ಬಿಸಿಸಿಐ ನಷ್ಟದಲ್ಲಿರುತ್ತೆ. ಬಿಸಿಸಿಐ ನೈಕ್ ಕಂಪೆನಿ ಜೊತೆಗಿನ ಒಪ್ಪಂದವನ್ನ ದಿಕ್ಕರಿಸಿರುವ ಕೊಹ್ಲಿ ಪುಮಾ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಕೊಹ್ಲಿ ಪ್ರತಿಕ್ರಿಯೆ ನೀಡೋ ಮುನ್ನ ಎಚ್ಚರ ವಹಿಸಬೇಕು ಎಂದು ಬಿಸಿಸಿಐ ಮೂಲಗಳು ಹೇಳಿವೆ ಎಂದು ಕ್ರಿಕೆಟ್ ಕಂಟ್ರಿ ವರದಿ ಮಾಡಿದೆ.
 

click me!