ಡಿಆರ್'ಎಸ್ ವಿವಾದ-ಕೊಹ್ಲಿ ಬೆಂಬಲಕ್ಕೆ ಹಾಗ್

Published : Mar 12, 2017, 05:00 PM ISTUpdated : Apr 11, 2018, 12:53 PM IST
ಡಿಆರ್'ಎಸ್ ವಿವಾದ-ಕೊಹ್ಲಿ ಬೆಂಬಲಕ್ಕೆ ಹಾಗ್

ಸಾರಾಂಶ

ಕೊಹ್ಲಿ ಹಾಗೂ ಸ್ಮಿತ್ ನಡುವಿನ ಮಾತಿನ ಚಕಮಕಿ ನನಗೆ ಹಿಡಿಸಿತು. ಈ ರೀತಿಯ ಪ್ರಸಂಗಗಳು ಆಟದ ರೋಚಕತೆಯನ್ನು ಹೆಚ್ಚಿಸುತ್ತವೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಮಾ.12): ಆಸೀಸ್ ನಾಯಕ ಸ್ಟೀವನ್ ಸ್ಮಿತ್ ಅವರ ಡಿಆರ್‌'ಎಸ್ ವಿವಾದಕ್ಕೆ ಪ್ರತಿಯಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಹೀಗಳೆದಿದ್ದವು. ಆದರೆ ಇದೀಗ ಒಬ್ಬರಾದ ಮೇಲೆ ಒಬ್ಬರು ಆಸ್ಟ್ರೇಲಿಯಾದ ಮಾಜಿ ಆಟಗಾರರು ಕೊಹ್ಲಿಯ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.

ಮಾಜಿ ಎಡಗೈ ಸ್ಪಿನ್ನರ್ ಬ್ರಾಡ್ ಹಾಗ್ ಭಾರತೀಯ ನಾಯಕನನ್ನು ಬೆಂಬಲಿಸಿದ್ದು, ಮೈದಾನದಲ್ಲಿ ಕೊಹ್ಲಿಯ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಕೊಹ್ಲಿ ಒಬ್ಬ ಭಾವನಾತ್ಮಕ ವ್ಯಕ್ತಿ, ತಮ್ಮ ಆಟದಿಂದಲೇ ಎಲ್ಲಾ ಟೀಕೆಗಳಿಗೂ ಅವರು ಉತ್ತರಿಸುತ್ತಾರೆ. ಅವರ ಆಟ ಯುವಕರಿಗೆ ಮಾದರಿಯಾಗಿದ್ದು, ಕ್ರಿಕೆಟ್‌'ನಲ್ಲಿ ಈ ರೀತಿಯ ವಿವಾದಗಳು ಸಾಮಾನ್ಯ" ಎಂದಿದ್ದಾರೆ.

ಕೊಹ್ಲಿ ಹಾಗೂ ಸ್ಮಿತ್ ನಡುವಿನ ಮಾತಿನ ಚಕಮಕಿ ನನಗೆ ಹಿಡಿಸಿತು. ಈ ರೀತಿಯ ಪ್ರಸಂಗಗಳು ಆಟದ ರೋಚಕತೆಯನ್ನು ಹೆಚ್ಚಿಸುತ್ತವೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?