
ಲಾಹೋರ್(ಮಾ.12): ಪಾಕಿಸ್ತಾನ ಸೂಪರ್ ಲೀಗ್ ಚಾಂಪಿಯನ್ ತಂಡ ಪೇಶಾವರ್ ಝಲ್ಮಿ ತಂಡದ ಸದಸ್ಯರಾಗಿದ್ದ ವೆಸ್ಟ್‌ಇಂಡೀಸ್ ಆಟಗಾರ ಮರ್ಲಾನ್ ಸ್ಯಾಮುಯಲ್ಸ್, ಪಾಕಿಸ್ತಾನ ಸೇನೆಗೆ ಸೇರಲು ಇಚ್ಛಿಸಿದ್ದಾರೆ.
ಪಿಎಸ್'ಎಲ್ ಎರಡನೇ ಆವೃತ್ತಿಯ ಫೈನಲ್ ಪಂದ್ಯವನ್ನು ಲಾಹೋರ್'ನಲ್ಲಿ ಆಯೋಜಿಸಲಾಗಿತ್ತು. ಪಾಕಿಸ್ತಾನಕ್ಕೆ ತೆರಳಲು ಹಲವು ಅಂತಾರಾಷ್ಟ್ರೀಯ ಆಟಗಾರರು ಹಿಂಜರಿದಿದ್ದರು.
ಆದರೆ ಲಾಹೋರ್‌ನಲ್ಲಿ ಫೈನಲ್ ಆಡಿದ ಬಳಿಕ ಆಟಗಾರರಿಗೆ ಅತ್ಯುತ್ತಮ ಭದ್ರತೆ ಒದಗಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರವನ್ನು ಹೊಗಳಿದ ಸ್ಯಾಮುಯಲ್ಸ್ , ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊರಿದ್ದಾರೆ.
ಹೃದಯದಲ್ಲಿ ನಾನೊಬ್ಬ ಪಾಕಿಸ್ತಾನಿ, ಹಾಗಾಗಿ ನನಗೆ ಲಾಹೋರ್'ಗೆ ಬರಲು ನಿರ್ಧರಿಸಲು ಹೆಚ್ಚಿಗೆ ಸಮಯ ಬೇಕಾಗಲಿಲ್ಲ ಎಂದು ಸ್ಯಾಮುಯಲ್ಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.