ಕೊಹ್ಲಿ ಅಗ್ರಸ್ಥಾನ ಭದ್ರ; ಏಕದಿನ ಕ್ರಿಕೆಟ್'ನಲ್ಲಿ ವಿರಾಟ್ ನಂ.1

By Suvarna Web DeskFirst Published Aug 19, 2017, 11:32 AM IST
Highlights

ಒಟ್ಟು 873 ರೇಟಿಂಗ್ ಅಂಕ ಹೊಂದಿರುವ ವಿರಾಟ್, ಲಂಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದರೆ ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್'ಗಿಂತ ಇನ್ನೂ 12 ಅಂಕ ಹೆಚ್ಚಿಗೆ ಸಂಪಾದಿಸುವ ಅವಕಾಶವಿದೆ.

ದುಬೈ(ಆ.19): ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಏಕದಿನ ಬ್ಯಾಟ್ಸ್‌'ಮನ್‌'ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಒಟ್ಟು 873 ರೇಟಿಂಗ್ ಅಂಕ ಹೊಂದಿರುವ ವಿರಾಟ್, ಲಂಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದರೆ ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್'ಗಿಂತ ಇನ್ನೂ 12 ಅಂಕ ಹೆಚ್ಚಿಗೆ ಸಂಪಾದಿಸುವ ಅವಕಾಶವಿದೆ.

ಇದೇ ವೇಳೆ ಅಗ್ರ 15ರಲ್ಲಿ ಧೋನಿ 12, ಧವನ್ 13, ರೋಹಿತ್ 14ನೇ ಸ್ಥಾನ ಪಡೆದಿದ್ದಾರೆ. ಆದರೆ ಅಗ್ರ 10 ಬೌಲರ್‌'ಗಳ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಆದರೆ ಟಾಪ್ 15 ಪಟ್ಟಿಯಲ್ಲಿ ವೇಗಿ ಭುವನೇಶ್ವರ್ ಕುಮಾರ್ 13ನೇ ಸ್ಥಾನ ಪಡೆದಿದ್ದಾರೆ.

ಇನ್ನು ಭಾರತ 3ನೇ ಸ್ಥಾನದಲ್ಲೇ ಮುಂದುವರಿದಿದ್ದು, ಈ ಸ್ಥಾನ ಕಾಪಾಡಿಕೊಳ್ಳಬೇಕಿದ್ದರೆ ಲಂಕಾ ವಿರುದ್ಧ ಕನಿಷ್ಠ 4-1ರಿಂದ ಸರಣಿ ಗೆಲ್ಲಬೇಕಿದೆ. ಒಂದು ವೇಳೆ 3-2ರಲ್ಲಿ ಸರಣಿ ಗೆದ್ದರೂ ಇಂಗ್ಲೆಂಡ್‌'ಗೆ 3ನೇ ಸ್ಥಾನ ಬಿಟ್ಟುಕೊಡಲಿದೆ. ಇನ್ನು 1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ಟೀಂ ಇಂಡಿಯಾ ಎದುರು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆಲ್ಲದಿದ್ದರೇ 2019ರ ವಿಶ್ವಕಪ್'ಗೆ ನೇರ ಪ್ರವೇಶ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳಲಿದೆ.

click me!