ಭಾರತ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟ; ಸ್ಟಾರ್ ಆಟಗಾರ ಮತ್ತೆ ಔಟ್..!

By Suvarna Web DeskFirst Published Aug 19, 2017, 9:39 AM IST
Highlights

ಸ್ಟೀವ್ ಸ್ಮಿತ್ ಒನ್‌'ಡೇ ಹಾಗೂ ಟಿ20 ಎರಡೂ ತಂಡವನ್ನು ಮುನ್ನಡೆಸಲಿದ್ದಾರೆ.

ಮೆಲ್ಬೊರ್ನ್(ಆ.19): ಮುಂದಿನ ತಿಂಗಳು ಆರಂಭಗೊಳ್ಳಲಿರುವ ಭಾರತ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ಗಾಯಾಳು ಮಿಚೆಲ್ ಸ್ಟಾರ್ಕ್ ತಂಡದಿಂದ ಹೊರಬಿದ್ದಿದ್ದಾರೆ. ಸ್ಟಾರ್ಕ್ ಮಾತ್ರವಲ್ಲದೇ ಐಪಿಎಲ್'ನಲ್ಲಿ ಕೆಕೆಆರ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಕ್ರಿಸ್ ಲಿನ್ ಕೂಡಾ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಇದೇ ವೇಳೆ ಆಲ್ರೌಂಡರ್ ಜೇಮ್ಸ್ ಫೌಕ್ನರ್ ಹಾಗೂ ವೇಗಿ ನೇಥನ್ ಕೌಲ್ಟರ್ ನೈಲ್ ತಂಡಕ್ಕೆ ವಾಪಸ್ಸಾಗಿದ್ದಾರೆ.

ಸೆ.17ರಿಂದ ಆ.13ರ ವರೆಗೂ ಭಾರತ-ಆಸ್ಟ್ರೇಲಿಯಾ 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿವೆ. 2015ರ ಏಕದಿನ ವಿಶ್ವಕಪ್ ಫೈನಲ್‌'ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಫೌಕ್ನರ್ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಡಲಾಗಿತ್ತು. ಕೌಲ್ಟರ್ ನೈಲ್ 2017ರ ಐಪಿಎಲ್‌'ನಲ್ಲಿ ಕೆಕೆಆರ್ ಪರ ಗಮನಾರ್ಹ ಪ್ರದರ್ಶನ ತೋರಿದ್ದರು. ಏಕದಿನದ ಜತೆಗೆ ಟಿ20 ತಂಡದಲ್ಲೂ ಕೌಲ್ಟರ್‌'ನೈಲ್‌'ಗೆ ಸ್ಥಾನ ದೊರೆತಿದೆ. ಸ್ಟೀವ್ ಸ್ಮಿತ್ ಒನ್‌ಡೇ ಹಾಗೂ ಟಿ20 ಎರಡೂ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್‌'ನಲ್ಲಿ ಗಮನ ಸೆಳೆದಿದ್ದ ಮೋಸೆಸ್ ಹೆನ್ರಿಕ್ಸ್, ಕ್ರಿಸ್ ಲಿನ್ ಜತೆಗೆ ಜಾನ್ ಹೇಸ್ಟಿಂಗ್ಸ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಸಹ ಗಾಯದ ಸಮಸ್ಯೆ ಎದುರಿಸುತ್ತಿದ್ದು ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಏಕದಿನ ತಂಡ:

ಸ್ಮಿತ್, ವಾರ್ನರ್, ಅಗರ್, ಕಾರ್ಟ್‌ರೈಟ್, ಕೌಲ್ಟರ್‌ನೈಲ್, ಕಮಿನ್ಸ್, ಫೌಕ್ನರ್, ಫಿಂಚ್, ಹೇಜಲ್‌ವುಡ್, ಹೆಡ್, ಮ್ಯಾಕ್ಸ್ ವೆಲ್, ಸ್ಟೊಯ್ನಿಸ್, ವೇಡ್, ಜಂಪಾ.

ಟಿ20 ತಂಡ:

ಸ್ಮಿತ್, ವಾರ್ನರ್, ಕ್ರಿಶ್ಚಿಯನ್, ಕೌಲ್ಟರ್ ನೈಲ್, ಕಮಿನ್ಸ್, ಫಿಂಚ್, ಹೆಡ್, ಹೆನ್ರಿಕ್ಸ್, ಮ್ಯಾಕ್ಸ್‌ವೆಲ್, ಪೇನ್, ರಿಚರ್ಡ್‌ಸನ್, ಜಂಪಾ,ಬೆಹ್ರೆಂದಾರ್ಫ್.

click me!