ಕೊಹ್ಲಿ, ಎಬಿಡಿ ಶೂನ್ಯ ಸುತ್ತಿದ್ದು ಪಾಕಿಸ್ತಾನದ ಈಕೆಯಿಂದ...!

Published : Jun 09, 2017, 08:41 PM ISTUpdated : Apr 11, 2018, 12:49 PM IST
ಕೊಹ್ಲಿ, ಎಬಿಡಿ ಶೂನ್ಯ ಸುತ್ತಿದ್ದು ಪಾಕಿಸ್ತಾನದ ಈಕೆಯಿಂದ...!

ಸಾರಾಂಶ

ಇದನ್ನೆಲ್ಲಾ ನೋಡಿದರೆ ಸೆಲ್ಫಿಗೂ ಪ್ರಚಂಡ ಬ್ಯಾಟ್ಸ್'ಮನ್'ಗಳನ್ನು ಸೊನ್ನೆಗೆ ಔಟ್ ಮಾಡಿಸುವ ತಾಕತ್ತು ಇದೆ ಎನ್ನೋ ಅನುಮಾನ ಮೂಡುವಂತೆ ಮಾಡಿದೆ.

ಕ್ರಿಕೆಟ್'ನಲ್ಲಿ ಸಾಕಷ್ಟು ಬಾರಿ ಕಾಕತಾಳೀಯಗಳು ಸಂಭವಿಸುತ್ತವೆ. ಅಂತಹ ಹಲವಾರು ಸಂದರ್ಭಗಳಿಗೂ ನಾವೆಲ್ಲ ಸಾಕ್ಷಿಯಾಗಿರುತ್ತೇವೆ. ಆದರೆ ಈಗ ಸಂಭವಿಸಿರುವ ಸನ್ನಿವೇಷ ಮಾತ್ರ ನಿಜಕ್ಕೂ ಕುತೂಹಲ ಎನಿಸಿಸುತ್ತಿದೆ.

ಅರೆ ಏನಪ್ಪಾ ಇದು ಇಷ್ಟೊಂದು ಪೀಠಿಕೆ ಹಾಕ್ತಾ ಇದಾರೆ ಅಂತಾ ಯೋಚ್ನೆ ಮಾಡ್ತಾ ಇದೀರಾ... ಹೌದು ಇದೀಗ ಸದ್ದು ಮಾಡ್ತಾ ಇರೋದು ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿರೋ ಹಿಂದಿನ ರಹಸ್ಯದ ಬಗ್ಗೆ.  ಏಕದಿನ ಕ್ರಿಕೆಟ್'ನಲ್ಲಿ ಇದೇ ಮೊದಲ ಬಾರಿಗೆ ಎಬಿಡಿ ಶೂನ್ಯ ಸುತ್ತಲು, ಮೂರು ವರ್ಷಗಳ ಬಳಿಕ ಕೊಹ್ಲಿ ಗೋಲ್ಡನ್ ಡಕ್'ಗೆ ಬಲಿಯಾಗಲು ಕಾರಣ ಜಹೀರ್ ಅಬ್ಬಾಸ್ ಅಂತೆ..! ಈಕೆ ಪಾಕಿಸ್ತಾನದ ಕ್ರಿಕೆಟ್ ವರದಿಗಾರ್ತಿ ಜಹೀರ್ ಅಬ್ಬಾಸ್ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಹೌದು ಮೊದಲು ಜಹೀರ್ ಅಬ್ಬಾಸ್ ಎಬಿ ಡಿವಿಲಿಯರ್ಸ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡ ಬಳಿಕ ಆಫ್ರಿಕಾ ನಾಯಕ ಶೂನ್ಯ ಸುತ್ತಿ ಶಾಕ್ ಅನುಭವಿಸಿದರು. ಇದಾದ ಬೆನ್ನಲ್ಲೇ ಕೊಹ್ಲಿ ಜತೆಗೆ ಸ್ವಂತಿ ತೆಗೆಸಿಕೊಂಡ ಅಬ್ಬಾಸ್ ಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದನ್ನೆಲ್ಲಾ ನೋಡಿದರೆ ಸೆಲ್ಫಿಗೂ ಪ್ರಚಂಡ ಬ್ಯಾಟ್ಸ್'ಮನ್'ಗಳನ್ನು ಸೊನ್ನೆಗೆ ಔಟ್ ಮಾಡಿಸುವ ತಾಕತ್ತು ಇದೆ ಎನ್ನೋ ಅನುಮಾನ ಮೂಡುವಂತೆ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kabaddi Player: ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಪತ್ನಿ ಶವವಾಗಿ ಪತ್ತೆ: ವಿಚಾರಣೆಗೆ ಒಳಪಟ್ಟ ಪತಿ!
ಏಕದಿನ ವಿಶ್ವಕಪ್ ಗೆಲ್ಲಲು ಆರ್‌ಸಿಬಿಯಂತೆ ಪರ್ಫೆಕ್ಟ್‌ ಭಾರತ ತಂಡ ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಆದ್ರೆ ಗಂಭೀರ್ ಆಪ್ತನಿಗಿಲ್ಲ ಸ್ಥಾನ