ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ 6 'ಗುರುಗಳ' ಕಿರು ಪರಿಚಯ

Published : Jun 09, 2017, 06:45 PM ISTUpdated : Apr 11, 2018, 12:34 PM IST
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ 6 'ಗುರುಗಳ' ಕಿರು ಪರಿಚಯ

ಸಾರಾಂಶ

ಈಗಾಗಲೇ ಹಾಲಿ ಕೋಚ್ ಅನಿಲ್ ಕುಂಬ್ಳೆ ಸೇರಿದಂತೆ ಒಟ್ಟು ಆರು ಮಂದಿ ಕೊಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಟಾಮ್ ಮೂಡಿ, ವಿರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ ಸೇರಿದಂತೆ ಆರು ಮಂದಿಯ ಕಿರು ಪರಿಚಯ ನಿಮ್ಮ ಮುಂದೆ..

ಬೆಂಗಳೂರು(ಜೂ.09): ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆ ಯಾರ ಪಾಲಾಗಲಿದೆ ಎನ್ನುವ ಬಿಸಿಬಿಸಿ ಚರ್ಚೆ ಕ್ರಿಕೆಟ್ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಹಾಲಿ ಕೋಚ್ ಅನಿಲ್ ಕುಂಬ್ಳೆ ಸೇರಿದಂತೆ ಒಟ್ಟು ಆರು ಮಂದಿ ಕೊಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಟಾಮ್ ಮೂಡಿ, ವಿರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ ಸೇರಿದಂತೆ ಆರು ಮಂದಿಯ ಕಿರು ಪರಿಚಯ ನಿಮ್ಮ ಮುಂದೆ..

ಅನಿಲ್ ಕುಂಬ್ಳೆ:

ಟೀಂ ಇಂಡಿಯಾದ ಯಶಸ್ವಿ ಬೌಲರ್, ಹಾಲಿ ಮುಖ್ಯ ಕೋಚ್. ಕುಂಬ್ಳೆ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ತಲುಪಿದೆ. ಕುಂಬ್ಳೆ ಮಾರ್ಗದರ್ಶನದಲ್ಲಿ ಒಟ್ಟು 17 ಟೆಸ್ಟ್ ಪಂದ್ಯಗಳನ್ನಾಡಿದ್ದು 12ರಲ್ಲಿ ಜಯಸಾಧಿಸಿ ಕೇವಲ ಒಂದು ಪಂದ್ಯದಲ್ಲಿ ಸೋಲುಂಡಿದೆ.

ಚಾಂಪಿಯನ್ಸ್ ಟ್ರೋಫಿ ಬಳಿಕ ಕುಂಬ್ಳೆ ಕೋಚ್ ಅಧಿಕಾರವಧಿ ಮುಕ್ತಾಯವಾಗಲಿದ್ದು, ಮತ್ತೊಮ್ಮೆ ಟೀಂ ಇಂಡಿಯಾ ಮಾರ್ಗದರ್ಶಕರಾಗಲು ಆಸಕ್ತರಾಗಿದ್ದಾರೆ.

ವಿರೇಂದ್ರ ಸೆಹ್ವಾಗ್:

ಕೋಚ್ ಹುದ್ದೆಗೆ ಸಾಕಷ್ಟು ಸುದ್ದಿ ಮಾಡಿದ್ದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್. ಕೇವಲ ಎರಡು ಸಾಲಿನ ಅರ್ಜಿಸಲ್ಲಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದ ಸೆಹ್ವಾಗ್, ಹಾಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಕೂಡಾ ಹೌದು. ಟೀಂ ಇಂಡಿಯಾದ ಬಹುತೇಕ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿರುವ ಸೆಹ್ವಾಗ್ ಇದೀಗ ಕೋಚ್ ಹುದ್ದೆಯ ಪ್ರಬಲ ಆಕಾಂಕ್ಷಿ ಕೂಡಾ ಹೌದು.

ಟಾಮ್ ಮೂಡಿ:

ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ. ಸುಮಾರು 12 ವರ್ಷಕ್ಕೂ ಹೆಚ್ಚುಕಾಲ ಕೋಚ್ ಹುದ್ದೆ ನಿರ್ವಹಿಸಿದ ಅಪಾರ ಅನುಭವ. 2007ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೇ ಪ್ರಸ್ತುತ ಸನ್'ರೈಸರ್ಸ್ ಹೈದರಾಬಾದ್ ತಂಡದ ಹಾಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತದ್ದು, ಅವರ ಗರಡಿಯಲ್ಲಿ ಕಳೆದ ವರ್ಷ ಸನ್'ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ದೊಡ್ಡ ಗಣೇಶ್

ಕರ್ನಾಟಕ ತಂಡದ ಮಾಜಿ ರಣಜಿ ಕ್ರಿಕೆಟಿಗ. ಪ್ರತಮ ದರ್ಜೆ ಕ್ರಿಕೆಟ್'ನಲ್ಲಿ 104 ಪಂದ್ಯಗಳನ್ನಾಡಿದ್ದು, 365 ವಿಕೆಟ್ ಕಿತ್ತಿದ್ದಾರೆ. ಅಲ್ಲದೇ 1997ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತರಾಷ್ಟ್ರೀಯ ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ದರು.

ಲಾಲ್ ಚಂದ್ ರಜಪೂತ್:

ಮುಂಬೈ ಮೂಲದ ಭಾರತ ತಂಡದ ಮಾಜಿ ಕ್ರಿಕೆಟಿಗ. ಭಾರತ ಎ ಹಾಗೂ 19 ವರ್ಷದೊಳಗಿನವರ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ. ರಜಪೂತ್ ಮೊದಲ ಆವೃತ್ತಿಯ ಐಪಿಎಲ್'ನಲ್ಲಿ ಮುಂಬೈ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಇಂಜಮಾಮ್ ಉಲ್ ಹಕ್ ಅವರಿಂದ ತೆರವಾದ ಆಫ್ಘಾನಿಸ್ತಾನ ಕೋಚ್ ಹುದ್ದೆಯ ಸ್ಥಾನವನ್ನು ರಜಪೂತ್ ನಿರ್ವಹಿಸುತ್ತಿದ್ದಾರೆ.

ರಿಚರ್ಡ್ ಫೈಬಸ್:

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ. 2013ರಿಂದ ವೆಸ್ಟ್'ಇಂಡಿಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಣೆ.

ದಕ್ಷಿಣ ಆಫ್ರಿಕಾದ ಪ್ರಾದೇಶಿಕ ತಂಡದ ಕೋಚ್ ಆಗಿದ್ದು ಮಾತ್ರವಲ್ಲದೇ ಜಸ್ಟೀನ್ ಕೆಂಪ್, ಇಮ್ರಾನ್ ತಾಹಿರ್, ಡೇಲ್ ಸ್ಟೇನ್, ಫಾಫ್ ಡ್ಯು ಪ್ಲೆಸಿಸ್ ಅವರಂತಹ ಪ್ರತಿಭಾನ್ವಿತ ಆಟಗಾರರನ್ನು ಪರಿಚಯಿಸಿದ ಕೀರ್ತಿ ಫೈಬಸ್ ಅವರಿಗೆ ಸಲ್ಲುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್