ಟೀಂ ಇಂಡಿಯಾ ವಿರುದ್ಧದ ಗೆಲುವನ್ನು ಇವರಿಗೆ ಸಮರ್ಪಸಿದ ಲಂಕಾ ಕ್ಯಾಪ್ಟನ್ ಏಂಜಲೋ ಮ್ಯಾಥ್ಯೂಸ್!

By Suvarna Web DeskFirst Published Jun 9, 2017, 3:40 PM IST
Highlights

ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಬಿ ಅಡಿಯಲ್ಲಿ ಆಡಿದ ಪಂದ್ಯದಲ್ಲಿ ಸಿಕ್ಕ ಗೆಲುವನ್ನು ಶ್ರೀಲಂಕಾದ ಕ್ಯಾಪ್ಟನ್ ಏಂಜಲೋ ಮ್ಯಾಥ್ಯೂಸ್ ಕಳೆದ ವಾರ ಶ್ರೀಲಂಕಾದಲ್ಲಿ ಪ್ರವಾಹದಕ್ಕೀಡಾದ ಸಂತ್ರಸ್ತರಿಗೆ ಸಮರ್ಪಿಸಿದ್ದಾರೆ. ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಗುರುವಾರದಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ಭಾರತ ತಂಡದ ವಿರುದ್ಧ ಏಳು ವಿಕೆಟ್'ಗಳ ಜಯ ಸಾಧಿಸಿತ್ತು.

ಲಂಡನ್(ಜೂ.09): ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಬಿ ಅಡಿಯಲ್ಲಿ ಆಡಿದ ಪಂದ್ಯದಲ್ಲಿ ಸಿಕ್ಕ ಗೆಲುವನ್ನು ಶ್ರೀಲಂಕಾದ ಕ್ಯಾಪ್ಟನ್ ಏಂಜಲೋ ಮ್ಯಾಥ್ಯೂಸ್ ಕಳೆದ ವಾರ ಶ್ರೀಲಂಕಾದಲ್ಲಿ ಪ್ರವಾಹದಕ್ಕೀಡಾದ ಸಂತ್ರಸ್ತರಿಗೆ ಸಮರ್ಪಿಸಿದ್ದಾರೆ. ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಗುರುವಾರದಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ಭಾರತ ತಂಡದ ವಿರುದ್ಧ ಏಳು ವಿಕೆಟ್'ಗಳ ಜಯ ಸಾಧಿಸಿತ್ತು.

ಟಾಸ್'ನಲ್ಲಿ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅದ್ಭುತ ಆಟವಾಡಿತ್ತು. ನಿಗದಿತ 50 ಓವರ್'ಗಳಲ್ಲಿ 322 ರನ್'ಗಳನ್ನು ಕಲೆ ಹಾಕುವ ಮೂಲಕ ಶ್ರೀಲಂಕಾಗೆ ಕಠಿಣ ಸವಾಲೊಡ್ಡಿತ್ತು. ಆದರೆ ಭಾರತ ನೀಡಿದ ಈ ಗುರಿಯನ್ನು ಶ್ರೀಲಂಕಾ ತನ್ನ ಅತ್ಯುತ್ತಮ ಬ್ಯಾಟ್ಸ್'ಮನ್'ಗಳ ಸಹಾಯದಿಂದ 48. 4 ಓವರ್'ಗಳಲ್ಲೇ ಸಾಧಿಸಿತ್ತು. ಈ ಪಂದ್ಯದ ಬಳಿಕ ಮಾತನಾಡಿದ ಶ್ರೀಲಂಕಾ ಕ್ಯಾಪ್ಟನ್ "ಈ ಪಂದ್ಯದಲ್ಲಿ ಜಯ ಗಳಿಸುವುದು ಅಗತ್ಯವಾಗಿತ್ತು.  ನಾವೆಲ್ಲಿ ಹೋದರೂ ನಮ್ಮ ಸಮರ್ಥಕರು, ಅಭಿಮಾನಿಗಳು ನಮ್ಮ ಮನೋಬಲ ಹೆಚ್ಚಿಸಲು ಅಲ್ಲಿ ತಲುಪುತ್ತಾರೆ. ಇತ್ತೀಚೆಗಷ್ಟೇ ನಾವು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇವೆ. ಕಳೆದ ವಾರವಷ್ಟೇ ಎದುರಾದ ಪ್ರವಾಹದಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ ಅಲ್ಲದೇ ಹಲವಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಹೀಗಿರುವಾಗ ನಮ್ಮ ದೇಶದ ಜನರ ಮುಖದಲ್ಲಿ ಖುಷಿ ತಂದು ನಾವು ಧನ್ಯರಾಗಿದ್ದೇವೆ" ಎಂದರು.

ಮುಂದೆ ಮಾತನಾಡಿದ ಕ್ಯಾಪ್ಟನ್ ಮ್ಯಾಥ್ಯೂಸ್ "ನಾವು ಜಯ ಗಳಿಸುತ್ತೇವೆಂಬ ವಿಶ್ವಾಸ ಯಾರಲ್ಲೂ ಇರಲಿಲ್ಲ. ಹೀಗಾಘಿಯೇ ನಮ್ಮ ಮೇಲೆ ಒತ್ತಡ ಹೆಚ್ಚಿತ್ತು. ಆದರೂ ಗಾಬರಿಯಾಗದೆ ನಾವೆಲ್ಲಾ ಈ ಪಂದ್ಯದಲ್ಲಿ ಆಡಲು ನಿರ್ಧರಿಸಿದೆವು. ನಾವು ಯಾವಾಗ ಸ್ವತಂತ್ರವಾಗಿ, ಗಾಬರಿಗೊಳ್ಳದೆ ಆಡಲು ನಿರ್ಧರಿಸುವಾಗ ಯಾವ ರೀತಿಯ ಫಲಿತಾಂಶ ಸಿಗುತ್ತದೆ ಎಂಬುವುದನ್ನು ನಮ್ಮ ಇಂದಿನ ಾಟದಿಂದ ನೀವೇ ಕಂಡುಕೊಳ್ಳಬಹುದು" ಎಂದಿದ್ದಾರೆ.

click me!