ವಿರಾಟ್ ಮನುಷ್ಯ ಅಂತ ಅನಿಸುವುದಿಲ್ಲ ಎಂದ ಬಾಂಗ್ಲಾ ಆಟಗಾರ !

Published : Oct 23, 2018, 08:53 PM IST
ವಿರಾಟ್ ಮನುಷ್ಯ ಅಂತ ಅನಿಸುವುದಿಲ್ಲ ಎಂದ ಬಾಂಗ್ಲಾ ಆಟಗಾರ !

ಸಾರಾಂಶ

ಬ್ಯಾಟ್ ಹಿಡಿದು ಕ್ರೀಸ್ ನಲ್ಲಿ ನಿಂತರೆ ಇದು ಸಾಬೀತಾಗುತ್ತದೆ. ಪ್ರತಿ ಪಂದ್ಯದಲ್ಲಿಯೂ ಶತಕ ದಾಖಲಿಸುತ್ತಾರೆ. ಅವರ ಪ್ರದರ್ಶನ ಅತ್ಯಂತ ಅಚ್ಚರಿ ಮೂಡಿಸುತ್ತದೆ. ನಿಜಕ್ಕೂ ಇದು ಅದ್ಭುತ.  ಮೂರು ವಿಧಾನದ ಆಟಗಳಲ್ಲೂ ಇವರೇ ನಂ 1 .

ನವದೆಹಲಿ[ಅ.23]: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರ ಆಟವನ್ನು ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಸೊಗಸಾಗಿ ವರ್ಣಿಸಿದ್ದಾರೆ.  

ಮಾಧ್ಯಮವೊಂದಕ್ಕೆ ಸಂದರ್ಶನ ನಿಡಿರುವ ಅವರು, ವಿರಾಟ್ ಕೆಲವೊಮ್ಮೆ ಮನುಷ್ಯ ಅಂತ ನಿಸುವುದಿಲ್ಲ. ಬ್ಯಾಟ್ ಹಿಡಿದು ಕ್ರೀಸ್ ನಲ್ಲಿ ನಿಂತರೆ ಇದು ಸಾಬೀತಾಗುತ್ತದೆ. ಪ್ರತಿ ಪಂದ್ಯದಲ್ಲಿಯೂ ಶತಕ ದಾಖಲಿಸುತ್ತಾರೆ. ಅವರ ಪ್ರದರ್ಶನ ಅತ್ಯಂತ ಅಚ್ಚರಿ ಮೂಡಿಸುತ್ತದೆ. ನಿಜಕ್ಕೂ ಇದು ಅದ್ಭುತ.  ಮೂರು ವಿಧಾನದ ಆಟಗಳಲ್ಲೂ ಇವರೇ ನಂ 1 . ಖ್ಯಾತ ಆಟಗಾರನಿಂದ ಕಲಿಯುವುದು ಸಾಕಷ್ಟಿದೆ ಎಂದು ಹೊಗಳಿದರು. 

ಕಳೆದ 12 ವರ್ಷಗಳಲ್ಲಿ ಹಲವು ಶ್ರೇಷ್ಠ ಆಟಗಾರರನ್ನು ನೋಡಿದ್ದೇನೆ ಅವರ ಜೊತೆ ಆಟವಾಡಿದ್ದೇನೆ. ಅವರೆಲ್ಲರಿಗೂ ಅವರದೇ ಆದ ತಂತ್ರಗಳಿದ್ದವು. ಆದರೆ ಕೊಹ್ಲಿ ರೀತಿಯ ಆಟವನ್ನು ಯಾವೊಬ್ಬ ಆಟಗಾರನಲ್ಲೂ ಕಂಡಿಲ್ಲ ಎಂದು ತಿಳಿಸಿದರು. 

ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿರುವ ಕ್ರಿಕೆಟಿಗರ ದಾಖಲೆಯನ್ನು ಸರಿಗಟ್ಟಲು ಕೇವಲ 81 ರನ್ ಗಳು ಮಾತ್ರ ಬಾಕಿಯಿದೆ. ಸಚಿನ್ 10,000 ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡರೆ ವಿರಾಟ್ ಕೇವಲ 204 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!