ವಿರಾಟ್ - ರೋಹಿತ್ ಶತಕದಾಟ : ಭಾರತಕ್ಕೆ ಭರ್ಜರಿ ಜಯ

By Web DeskFirst Published Oct 21, 2018, 9:03 PM IST
Highlights

107 ಎಸೆತಗಳಲ್ಲಿ  21 ಬೌಂಡರಿ ಹಾಗೂ 2 ಸಿಕ್ಸ್'ರ್'ನೊಂದಿಗೆ 140 ರನ್ ಬಾರಿಸಿ ತಮ್ಮ ಏಕದಿನ ವೃತ್ತಿ ಜೀವನದ 36ನೇ ಶತಕ ದಾಖಲಿಸಿದರೆ, 116 ಎಸೆತಗಳೊಂದಿಗೆ 7 ಸಿಕ್ಸ್'ರ್ 15 ಬೌಂಡರಿಯೊಂದಿಗೆ 152 ರನ್ ಗಳೊಂದಿಗೆ ಅಜೇಯರಾಗಿ ಉಳಿದರು.

ಗುವಾಹಟಿ[ಅ.21]:  ನಾಯಕ ವಿರಾಟ್ ಕೊಹ್ಲಿ[140] ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ[152] ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್  ವಿರುದ್ಧ 8 ವಿಕೇಟ್'ಗಳ ಭರ್ಜರಿ ಜಯ ಸಾಧಿಸಿದರು.    

ವೆಸ್ಟ್ ಇಂಡೀಸ್ ಸವಾಲು ನೀಡಿದ್ದ 322 ರನ್’ಗಳ ಗುರಿಯನ್ನು ಕೇವಲ 42.1 ಓವರ್'ಗಳಲ್ಲಿ ಗುರಿ ಮುಟ್ಟಿದರು. 107 ಎಸೆತಗಳಲ್ಲಿ  21 ಬೌಂಡರಿ ಹಾಗೂ 2 ಸಿಕ್ಸ್'ರ್'ನೊಂದಿಗೆ 140 ರನ್ ಬಾರಿಸಿ ತಮ್ಮ ಏಕದಿನ ವೃತ್ತಿ ಜೀವನದ 36ನೇ ಶತಕ ದಾಖಲಿಸಿದರೆ, 116 ಎಸೆತಗಳೊಂದಿಗೆ 7 ಸಿಕ್ಸ್'ರ್ 15 ಬೌಂಡರಿಯೊಂದಿಗೆ 152 ರನ್ ಸ್ಫೋಟಿಸಿ ಅಜೇಯರಾಗಿ ಉಳಿದರು. ಇವರಿಬ್ಬರು 2ನೇ ವಿಕೇಟ್ ಜೊತೆಯಾಟದಲ್ಲಿ 246 ರನ್ ಪೇರಿಸಿದರು. 

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡ ಶಿಮ್ರೋನ್ ಹೆಟ್ಮಾಯಾರ್ ಅವರ  ಶತಕ[106] , ಜೇಸನ್ ಹೋಲ್ಡ ರ್ [51] ಅವರ ಆಕರ್ಷಕ ಅರ್ಧ ಶತಕದಿಂದ 322 ರನ್ ಗುರಿ ನೀಡಿತ್ತು.

ಸ್ಕೋರ್ 
ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 322
[ಹೆಟ್ಮಾಯಾರ್ 106,ಜೇಸನ್ ಹೋಲ್ಡರ್ 51 ಚಹಾಲ್ 41/3 ]

ಭಾರತ 42.1 ಓವರ್ ಗಳಲ್ಲಿ 326/2
[ರೋಹಿತ್ ಶರ್ಮಾ ಅಜೇಯ 152, ವಿರಾಟ್ ಕೊಹ್ಲಿ 140]

ಫಲಿತಾಂಶ: ಭಾರತಕ್ಕೆ 8 ವಿಕೇಟ್'ಗಳ ಜಯ
5 ಪಂದ್ಯಗಳ ಸರಣಿ 1-0 ಜಯ

 

Rohit Sharma finishes off things in style. win by 8 wickets. remains unbeaten on 152. pic.twitter.com/axXPZkGrQ7

— BCCI (@BCCI)
click me!