
ಗುವಾಹಟಿ[ಅ.21]: ಟೆಸ್ಟ್ ಸರಣಿ ಸೋತಿರುವ ವೆಸ್ಟ್ ಇಂಡೀಸ್ ತಂಡ ಶಿಮ್ರೋನ್ ಹೆಟ್ಮಾಯಾರ್ ಅವರ ಸ್ಫೋಟಕ ಶತಕ , ಜೇಸನ್ ಹೋಲ್ಡ ರ್ ಅವರ ಆಕರ್ಷಕ ಅರ್ಧ ಶತಕದಿಂದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ 322 ರನ್ ಗಳ ಬೃಹತ್ ಸವಾಲು ನೀಡಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡ'ರ್ ಅವರನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. 4ನೇ ಓವರ್ ನಲ್ಲಿ ಶಮಿ ಅವರು ಹೇಮರ್'ಜ್ ಅವರನ್ನು ಪೆವಿಲಿಯನ್ ಕಳಿಸಿ ಶಾಕ್ ನೀಡಿದರು. ನಂತರ ಆರಂಭಿಕ ಆಟಗಾರ ಕಿರೇನ್ ಪೋವೆಲ್[51] ಹಾಗೂ ವಿಕೇಟ್ ಕೀಪರ್ ಹೋಪ್ [32] ಉತ್ತಮ ಆರಂಭ ಒದಗಿಸಿದರು.
ವಿಂಡೀಸ್ ಮೂರು ವಿಕೇಟ್ ಕಳೆದುಕೊಂಡ ನಂತರ ಶಿಮ್ರೋನ್ ಹೆಟ್ಮಾಯಾರ್[106, 78 ಎಸೆತ, 6 ಸಿಕ್ಸ್, 6 ಬೌಂಡರಿ] ಸ್ಫೋಟಕ ಶತಕದ ನೆರವಿನಿಂದ ತಂಡವು 50 ಓವರ್ ಗಳಲ್ಲಿ 8 ವಿಕೇಟ್ ನಷ್ಟಕ್ಕೆ 322 ರನ್ ಪೇರಿಸಿತು. ಭಾರತದ ಪರ ಚಹಾಲ್ 41/3, ಶಮಿ ಹಾಗೂ ಜಡೇಜಾ ತಲಾ 2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 50 ಓವರ್'ಗಳಲ್ಲಿ 322/8
[ಶಿಮ್ರೋನ್ ಹೆಟ್ಮಾಯಾರ್ 106,ಕಿರೇನ್ ಪೋವೆಲ್ 51, ಚಹಾಲ್ 41/3]
ವಿವರ ಅಪೂರ್ಣ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.