ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಗಳು ಒಂದರ ಮೇಲೊಂದರಂತೆ ಪುಡಿ ಪುಡಿಯಾಗುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಪಾಂಟಿಂಗ್ ದಾಖಲೆ ಮುರಿದಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.
ಪೋರ್ಟ್ ಆಫ್ ಸ್ಪೇನ್(ಆ.21): ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಎಲ್ಲಾ ತಯಾರಿ ಮಾಡಿಕೊಂಡಿದೆ. ಆಗಸ್ಟ್ 22 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯ ಇದೀಗ ಹಲವು ಕಾರಣಗಳಿಂದ ಮಹತ್ವದ ಪಡೆದುಕೊಂಡಿದೆ. ಒಂದೆಡೆ ಟೆಸ್ಟ್ ಚಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತಕ್ಕಿದು ಮೊದಲನೇ ಪಂದ್ಯ. ಇದೇ ಪಂದ್ಯ ನಾಯಕ ವಿರಾಟ್ ಕೊಹ್ಲಿಗೆ ಹಲವು ದಾಖಲೆ ನಿರ್ಮಿಸಲು ವೇದಿಕೆ ಕಲ್ಪಿಸಿಕೊಟ್ಟಿದೆ.
ಇದನ್ನೂ ಓದಿ: ಧೋನಿ ನಾಯಕತ್ವದ ರೆಕಾರ್ಡ್ ಮುರಿಯಲು ಸಜ್ಜಾದ ಕೊಹ್ಲಿ..!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಲವು ದಿಗ್ಗಜರ ದಾಖಲೆ ಪುಡಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಧೋನಿಯ ಅತೀ ಹೆಚ್ಚು ಗೆಲುವಿನ ದಾಖಲೆಯನ್ನು ಬ್ರೇಕ್ ಮಾಡಲು ಹವಣಿಸುತ್ತಿರುವ ಕೊಹ್ಲಿ, ಇತ್ತ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಮೇಲೂ ಕನ್ನ ಹಾಕಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ನಾಯಕಾಗಿ 18 ಶತಕ ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ 19 ಸೆಂಚುರಿ ಭಾರಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಶ್ರೇಯಾಂಕ: ನಂ.1 ಪಟ್ಟಕ್ಕೆ ಕೊಹ್ಲಿಗೆ ಸ್ಮಿತ್ ಪೈಪೋಟಿ!
ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕಾಗಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಮಿತ್ 25 ಶತಕ ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಹಿಂದಿಕ್ಕಿಲು, ನಾಯಕ ವಿರಾಟ್ ಕೊಹ್ಲಿಗೆ ಇನ್ನೆರಡು ಶತಕದ ಅವಶ್ಯಕತೆ ಇದೆ. ವೆಸ್ಟ್ ಇಂಡೀಸ್ ವಿರುದ್ದದ 2 ಟೆಸ್ಟ್ ಪಂದ್ಯ 4 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಲು ಎಲ್ಲಾ ಅವಕಾಶಗಳಿವೆ.