ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಜಾರ್ಖಂಡ್ ತಂಡ ಪೀಲ್ಡಿಂಗ್ ಆಯ್ದುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.26]: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಗೆ ಮಳೆ ಅಡ್ಡಿಯಾಗುತ್ತಿದ್ದು, ಆರಂಭಿಕ ಸುತ್ತಿನ ಬಹುತೇಕ ಪಂದ್ಯಗಳು ರದ್ದಾಗಿವೆ. ಹೈದರಾಬಾದ್ ವಿರುದ್ಧ ಮಂಗಳವಾರ ನಡೆಯಬೇಕಿದ್ದ ಪಂದ್ಯ ಮಳೆಗೆ ಬಲಿಯದ ಬಳಿಕ, ಗುರುವಾರ ಕರ್ನಾಟಕ ತಂಡ ತನ್ನ 2ನೇ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಜಾರ್ಖಂಡ್ ಬೌಲಿಂಗ್ ಆಯ್ದುಕೊಂಡಿದೆ.
ಈ ಪಂದ್ಯದ ಕ್ಷಣ-ಕ್ಷಣದ ಸ್ಕೋರ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ...
ಮೊದಲ ಪಂದ್ಯ ನಗರದ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಆದರೆ ಗುರುವಾರದ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಕಾರಣ, ಪಂದ್ಯ ಆರಂಭಗೊಳ್ಳುವ ಅರ್ಧ ಗಂಟೆ ಮೊದಲು ಮಳೆ ನಿಂತರೂ ಆಟ ನಡೆಯಲಿದೆ. ಸಬ್-ಏರ್ ವ್ಯವಸ್ಥೆ ಇರುವ ಕಾರಣ, ಮಳೆ ನಿಂತು 20-30 ನಿಮಿಷಗಳಲ್ಲಿ ಆಟ ಆರಂಭಿಸಬಹುದಾಗಿದೆ.
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ-ಹೈದರಾಬಾದ್ ಪಂದ್ಯ ಮಳೆಯಿಂದ ರದ್ದು
ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಕೆ.ಎಲ್.ರಾಹುಲ್ ಮೇಲೆ ಎಲ್ಲರ ಕಣ್ಣಿದೆ. ದೇವದತ್ ಪಡಿಕ್ಕಲ್, ಕೆ.ವಿ.ಸಿದ್ಧಾರ್ಥ್ ಉತ್ತಮ ಲಯದಲ್ಲಿದ್ದು, ಅಭಿಷೇಕ್ ರೆಡ್ಡಿ ಹಾಗೂ ಪವನ್ ದೇಶಪಾಂಡೆ ಉಪಸ್ಥಿತಿಯಿಂದ ತಂಡದ ಬ್ಯಾಟಿಂಗ್ ಬಲಿಷ್ಠವಾಗಿ ತೋರುತ್ತಿದೆ. ಶ್ರೇಯಸ್ ಗೋಪಾಲ್, ಜೆ.ಸುಚಿತ್, ಪ್ರವೀಣ್ ದುಬೆ ಸ್ಪಿನ್ ಬೌಲರ್‌ಗಳಾಗಿ ತಂಡದಲ್ಲಿದ್ದಾರೆ. ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ, ವಿ.ಕೌಶಿಕ್ ಹಾಗೂ ಅಭಿಮನ್ಯು ಮಿಥುನ್ ತಂಡದಲ್ಲಿರುವ ವೇಗಿಗಳು.
ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ!
ಜಾರ್ಖಂಡ್ ತಂಡವನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುನ್ನಡೆಸಲಿದ್ದು, ಹಿರಿಯ ವೇಗಿ ವರುಣ್ ಆ್ಯರೋನ್, ಸ್ಪಿನ್ನರ್ ಶಾಬಾಜ್ ನದೀಮ್ ತಂಡದ ಪ್ರಮುಖ ಆಟಗಾರರೆನಿಸಿದ್ದಾರೆ. ಜಾರ್ಖಂಡ್ ತಂಡದ ಮೊದಲ ಪಂದ್ಯ ಸಹ ಮಳೆಗೆ ಬಲಿಯಾಗಿತ್ತು.
ಕರ್ನಾಟಕ ತಂಡ ಹೀಗಿದೆ:
ಉಚಿತ ಪ್ರವೇಶ
ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಕೆಎಸ್‌ಸಿಎ ಉಚಿತ ಪ್ರವೇಶ ಕಲ್ಪಿಸಿದ್ದು, ಗೇಟ್ ನಂ.14ರ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದಾಗಿದೆ. ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.