
ಹರಿಯಾಣ(ಜು.27): ಬಾಲಿವುಡ್ ಬ್ಲಾಕ್ ಬಸ್ಟರ್ ಮೂವಿ ಸುಲ್ತಾನ್ ಯಾರಿಗೆ ತಾನೆ ನೆನಪಿಲ್ಲ. ಈ ಚಿತ್ರದ ಜಗ್ ಗೂಮೆಯಾ ಹಾಡಿನ ಇಂಪು ಇನ್ನು ಮಾಸಿಲ್ಲ. ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಹೆಜ್ಜೆ ಹಾಕಿದ್ದರು. ಇದೀಗ ಈ ಚಿತ್ರದ ರಿಯಲ್ ಹೀರೋ ಡ್ಯಾನ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.
ಪೋಗತ್ ರಸ್ಲಿಂಗ್ ಕುಟುಂಬದ ದಂಗಲ್ ಮೂವಿ ಭಾರಿ ಜನಮನ್ನಣೆಗಳಿಸಿತ್ತು. ಇದೀಗ ಈ ಚಿತ್ರದ ರಿಯಲ್ ಹೀರೋ ಗೀತಾ ಪೋಗತ್ ಪತಿ, ರಸ್ಲರ್ ಪವನ್ ಕುಮಾರ್ ಡ್ಯಾನ್ಸ್ ವೀಡಿಯೋ ಭಾರಿ ವೈರಲ್ ಆಗಿದೆ.
ಕಾಮನ್ ವೆಲ್ತ್ ಗೇಮ್ಸ್ ಕೂಡದಲ್ಲಿ ಕಂಚಿನ ಪದಕ ಗೆದ್ದ ಪವನ್ ಕುಮಾರ್, ಇದೀಗ ಪತ್ನಿ ಗೀತಾ ಪೋಗತ್‌ಗಾಗಿ ಅದ್ಬುತ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ಗೀತಾ ಪೋಗತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗೀತಾ ಪೋಗತ್ ಈಗಾಗಲೇ ಖತ್ರೋನ್ ಕೇ ಖಿಲಾಡಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಇದೀಗ ಪತಿ ಪವನ್ ಕುಮಾರ್ ಡ್ಯಾನ್ಸ್ ಮಾಡೋ ಮೂಲಕ ಈ ಕ್ರೀಡಾ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ತಯಾರಿ ಮಾಡುತ್ತಿದ್ದಾರ ಅನ್ನೋ ಅನುಮಾನ ಮೂಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪವನ್ ಕುಮಾರ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.