ಗಿಬ್ಸ್, ಯುವಿ ಸಾಲಿಗೆ ಮತ್ತೊಬ್ಬ, 6ಕ್ಕೆ 6 ಸಿಕ್ಸರ್, ಫಿಫ್ಟಿ ಸಿಡಿಸಲು 12 ಚೆಂಡು ಸಾಕು!

Published : Oct 14, 2018, 09:22 PM ISTUpdated : Oct 14, 2018, 09:26 PM IST
ಗಿಬ್ಸ್, ಯುವಿ ಸಾಲಿಗೆ ಮತ್ತೊಬ್ಬ, 6ಕ್ಕೆ 6 ಸಿಕ್ಸರ್, ಫಿಫ್ಟಿ ಸಿಡಿಸಲು 12 ಚೆಂಡು ಸಾಕು!

ಸಾರಾಂಶ

ಕ್ರಿಕೆಟ್ ನಲ್ಲಿ ಪ್ರತಿದಿನ ಹೊಸ ಹೊಸ ದಾಖಲೆಗಳು ನಿರ್ಮಾಣ ಆಗುತ್ತಲೆ ಇರುತ್ತವೆ. ಹರ್ಷಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್ ಸಾಲಿಗೆ ಮತ್ತೊಬ್ಬ ಬ್ಯಾಟ್ಸಮನ್ ಸೇರ್ಪಡೆಯಾಗಿದ್ದಾರೆ. ಓವರ್ ನ 6 ಚೆಂಡುಗಳನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ. ಹಾಗಾದರೆ ಆ ದಾಂಡಿಗ ಯಾರು? ಯಾವ ದೇಶದವರು? 

ದುಬೈ[ಅ.14] ಅಫ್ಘಾನಿಸ್ತಾನ ಪ್ರೀಮಿಯರ್​​ ಲೀಗ್​ನಲ್ಲಿ ದಾಖಲೆ ನಿರ್ಮಾಣವಾಗಿದೆ. ಹಜರತ್​ ಉಲ್ಲಾ ಝಾಜೈ ಒಂದೇ ಓವರ್ ನಲ್ಲಿ ಆರು ಸಿಕ್ಸರ್​ ಸಿಡಿಸುವ ಮೂಲಕ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಶಾರ್ಜಾ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಾಲ್ಕ್​ ಲೆಜೆಂಡ್ಸ್​ ವಿರುದ್ಧ ಕಾಬೂಲ್​ ಜವಾನ್​ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಝಾಜೈ ನಾಲ್ಕನೇ ಓವರ್​​ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಬ್ದುಲ್ಲಾ ಮಜಾರಿ ಆರು ಸಿಕ್ಸರ್​ ಬಿಟ್ಟುಕೊಟ್ಟ ಬೌಲರ್.

ಬಾಲ್ಕ್​ ಲೆಜೆಂಡ್ಸ್​ ನೀಡಿದ 225 ರನ್​ಗಳ ಬೃಹತ್​ ಮೊತ್ತದ ಗುರಿ ಬೆನ್ನತ್ತಿದ ಕಾಬೂಲ್​ಪರ ಝಾಜೈ ಆರಂಭದಿಂದಲೇ  ಸವಾರಿ  ಮಾಡಿದರು. ಎರಡನೇ ಓವರ್​ನಲ್ಲಿ 20 ರನ್​ ಸಿಡಿಸಿದ ಅವರು ನಾಲ್ಕನೇ ಓವರ್​ನಲ್ಲಿ 6 ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಇದರ ಜೊತೆಗೆ ಒಂದು ವೈಡ್​ ಕೂಡ ಸೇರಿ  ಆ ಓವರ್ ನಲ್ಲಿ 37 ರನ್​ ದಾಖಲಾದವು. 

ಈ ಹಿಂದೆ ಏಕದಿನ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್​, ಭಾರತದ ಯುವರಾಜ್​ ಸಿಂಗ್​ ಟಿ20 ವಿಶ್ವಕಪ್​ನಲ್ಲಿ, ​ಸೋಬರ್ಸ್​ ಹಾಗೂ ರವಿಶಾಸ್ತ್ರಿ ಟೆಸ್ಟ್​ ಕ್ರಿಕೆಟ್​ನಲ್ಲಿ, ಅಲೆಕ್ಸ್​ ಹೇಲ್ಸ್​ ಹಾಗೂ ರಾಸ್​ ವೈಟ್ಲೆ ನಾಟ್​ವೆಸ್ಟ್​ ಟಿ20 ಕ್ರಿಕೆಟ್​ನಲ್ಲಿ, ಪೊಲಾರ್ಡ್​ ಬಿಗ್​ಬ್ಯಾಸ್​ ಅಭ್ಯಾಸ ಪಂದ್ಯದಲ್ಲಿ, ಶಾರ್ದೂಲ್​ ಠಾಕೂರ್ ​ಹಾಗೂ ರವೀಂದ್ರ ಜಡೇಜಾ ಕ್ಲಬ್​ ಕ್ರಿಕೆಟ್​ನಲ್ಲಿ 6 ಬಾಲಿಗೆ ಆರು ಸಿಕ್ಸರ್​ ಸಿಡಿಸಿದ ದಾಖಲೆ ಹೊಂದಿದ್ದವರಾಗಿದ್ದು ಅವರ ಸಾಲಿಗೆ ಝಾಜೈಸೇರ್ಪಡೆಯಾದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!