ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ: ಜೋಕೋ, ಅಲ್ಕರಜ್ ಮೇಲೆ ಕಣ್ಣು

By Kannadaprabha News  |  First Published Aug 26, 2024, 9:20 AM IST

ಇಂದಿನಿಂದ ವರ್ಷದ ಕೊನೆಯ ಟೆನಿಸ್ ಗ್ರ್ಯಾನ್‌ಸ್ಲಾಂ ಎನಿಸಿಕೊಂಡಿರುವ ಯುಎಸ್ ಓಪನ್ ಟೂರ್ನಿ ಆರಂಭವಾಗಲಿದ್ದು, ಪ್ಯಾರಿಸ್ ಒಲಿಂಪಿಕ್ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ ಕಾರ್ಲೋಸ್ ಅಲ್ಕರಜ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನ್ಯೂಯಾರ್ಕ್: ಕ್ಯಾಲೆಂಡರ್ ವರ್ಷದ ಕೊನೆ ಗ್ರ್ಯಾನ್‌ ಸ್ಲಾಂ ಟೆನಿಸ್ ಟೂರ್ನಿಯಾಗಿರುವ ಯುಎಸ್ ಓಪನ್‌ಗೆ ಸೋಮವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ನೋವಾಕ್ ಜೋಕೊವಿಚ್ ದಾಖಲೆಯ 25ನೇ ಗ್ರಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಡಲಿದ್ದಾರೆ.

ಸರ್ಬಿಯಾದ ಜೋಕೋ ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು. ಈ ವರ್ಷ ನಡೆದ 3 ಗ್ಯಾನ್‌ಸ್ಲಾಂಗಳಲ್ಲೂ ಜೋಕೋಗೆ ಪ್ರಶಸ್ತಿ ಕೈತಪ್ಪಿದೆ. ಆದರೆ ಇತ್ತೀಚೆಗಷ್ಟೇ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದ ಅವರು, ಸತತ 2ನೇ ಹಾಗೂ ಒಟ್ಟಾರೆ 5ನೇ ಬಾರಿ ಯುಎಸ್ ಓಪನ್ ಗೆಲ್ಲುವ ಕಾತರದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಮಾಲ್ಗೊವಾ ದೇಶದ ರಾಡು ಅಲ್ಯೂಟ್ ಸವಾಲು ಎದುರಾಗಲಿದೆ.

Tap to resize

Latest Videos

undefined

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ ಶಮಿ: ಯಾವಾಗ ಅಂತೇ..?

ಇನ್ನು, ಈ ವರ್ಷ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಆಗಿರುವ ಟೆನಿಸ್ ಹೊಸ ಸೂಪರ್ ಸ್ಟಾರ್ ಕಾರ್ಲೊಸ್ ಆಲ್ಲರಜ್ ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಅವರು 2ನೇ ಯುಎಸ್ ಓಪನ್, 5ನೇ ಗ್ಯಾನ್‌ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ನಂ.1 ಯಾನಿಕ್ ಸಿನ್ನರ್, 4ನೇ ಶ್ರೇಯಾಂಕಿತ ಅಲೆ ಕ್ಸಾಂಡರ್ ಜೆರೆವ್, 2021ರ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡೈಡೆವ್ ಕೂಡಾ ಕಣದಲ್ಲಿದ್ದಾರೆ.

ಗಾಫ್, ಇಗಾ ಮೇಲೆ ಕಣ್ಣು: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೊಕೊ ಗಾಫ್, 2022ರ ಚಾಂಪಿಯನ್, ಹಾಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಟೂರ್ನಿಯಲ್ಲಿರುವ ಪ್ರಮುಖರು. 4ನೇ ಶ್ರೇಯಾಂಕಿತ ಎಲೆನಾ ರಬೈಕೆನಾ, 2ನೇ ಶ್ರೇಯಾಂಕಿತ ಅರೈನಾ ಸಬಲೆಂಕಾ ಕೂಡಾ ಕಣದಲ್ಲಿದ್ದಾರೆ.

ಬೋಪಣ್ಣ, ಸುಮಿತ್ ನಗಾಲ್ ಕಣಕ್ಕೆ

ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಭಾರತದ ಏಕೈಕ ಸ್ಪರ್ಧಿಯಾಗಿದ್ದು, ಮೊದಲ ಸುತ್ತಿನಲ್ಲಿ ನೆದರ್‌ಂಡ್‌ನ ಟಾಲನ್ ವಿರುದ್ಧ ಸೆಣಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ರೋಹಣ್ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಲ್ಲೆನ್ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಯೂಕಿ ಭಾಂಬ್ರಿ - ಫ್ರಾನ್ಸ್‌ನ ಅಲ್ದಾನೊ ಒಲಿವೆಟ್ಟಿ, ಶ್ರೀರಾಂ ಬಾಲಾಜಿ- ಅರ್ಜೆಂಟೀನಾದ 8 ಆ್ಯಂಡೋಜಿ, ನಗಾಲ್-ಜಪಾನ್‌ನ ನಿಶಿಯೊಕ ಜೊತೆ ಆಡಲಿದ್ದಾರೆ.

ರೋಹಿತ್ ಶರ್ಮಾ ಖರೀದಿಸಲು ಈ ಎರಡು ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್; ಹಿಟ್‌ಮ್ಯಾನ್‌ಗಾಗಿ ಕೋಟಿ-ಕೋಟಿ ಸುರಿಯಲು ರೆಡಿ..!

ಯುಎಸ್‌ ಓಪನ್‌ನಿಂದ ಹಿಂದೆ ಸರಿದ ಮಾರ್ಕೆಟಾ

ನ್ಯೂಯಾರ್ಕ್‌: 2023ರ ವಿಂಬಲ್ಡನ್‌ ಚಾಂಪಿಯನ್‌ ಮಾರ್ಕೆಟಾ ವೊಂಡ್ರೌಸೊವಾ ಆ.26ರಿಂದ ಆರಂಭಗೊಳ್ಳಲಿರುವ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಶ್ವ ನಂ.18, ಚೆಕ್‌ ಗಣರಾಜ್ಯದ ಮಾರ್ಕೆಟಾ ಕೈ ಗಾಯದಿಂದ ಬಳಲುತ್ತಿದ್ದಾರೆ. ಜುಲೈನಲ್ಲಿ ವಿಂಬಲ್ಡನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಬಳಿಕ 25 ವರ್ಷದ ಮಾರ್ಕೆಟಾ ಒಂದೂ ಪಂದ್ಯಗಳನ್ನಾಡಿಲ್ಲ.

click me!