ರೋಹಿತ್ ಶರ್ಮಾ ಖರೀದಿಸಲು ಈ ಎರಡು ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್; ಹಿಟ್‌ಮ್ಯಾನ್‌ಗಾಗಿ ಕೋಟಿ-ಕೋಟಿ ಸುರಿಯಲು ರೆಡಿ..!

By Suvarna NewsFirst Published Aug 25, 2024, 5:15 PM IST
Highlights

ಐಪಿಎಲ್ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ₹50 ಕೋಟಿ ವೆಚ್ಚ ಮಾಡಲು ಸಿದ್ಧವಾಗಿವೆ ಎಂಬ ವದಂತಿ ಹಬ್ಬಿದೆ. ಈ ವರ್ಗಾವಣೆ ನಡೆದರೆ, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.

ಬೆಂಗಳೂರು: ಈ ವರ್ಷದ ಕೊನೆಯಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆ ನಡೆಸಿವೆ. ಆದ್ರೆ, ಈ ನಡುವೆ ಆ ಒಬ್ಬ ಆಟಗಾರನ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣ ಬಿದ್ದಿದೆ. ಅದರಲ್ಲೂ ಈ ಎರಡು ತಂಡಗಳ ಮಾಲೀಕರು ಆತನಿಗಾಗಿ ಕೋಟಿ-ಕೋಟಿ ಸುರಿಯಲು ತುದಿಗಾಲಲ್ಲಿ ನಿಂತಿವೆ. ಅಲ್ಲದೇ, ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ರೆಡಿಯಾಗಿವೆ. 

ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸೃಷ್ಟಿಯಾಗುತ್ತಾ ಹೊಸ ಇತಿಹಾಸ ..?  

Latest Videos

ರೋಹಿತ್ ಶರ್ಮಾ..! ಸದ್ಯ ಕ್ರಿಕೆಟ್ ಜಗತ್ತಿನ ಮೋಸ್ಟ್ ಡೇಂಜರಸ್ ಬ್ಯಾಟರ್. ಅಷ್ಟೇ ಅಲ್ಲ, ಟಿ20 ಫಾರ್ಮೆಟ್ನ ಗ್ರೇಟ್ ಕ್ಯಾಪ್ಟನ್. ಭಾರತ 2ನೇ ಟಿ20 ವಿಶ್ವಕಪ್ ಗೆಲ್ಲುವಲ್ಲಿ ರೋಹಿತ್ ನಾಯಕತ್ವ ಕೂಡ ಪ್ರಮು ಕಾರಣ. ಐಪಿಎಲ್‌ನಲ್ಲೂ ಹಿಟ್‌ಮ್ಯಾನ್ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್. ರೋಹಿತ್ ನಾಯಕತ್ವದಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಒಂದು ಸಲ ಚಾಂಪಿಯನ್ಸ್ ಲೀಗ್ ಕಪ್ ಎತ್ತಿಹಿಡಿದಿದೆ. 

ಆ ಎರಡು ವಿಷ್ಯದಿಂದ ಶಿಖರ್‌ ಧವನ್ ಕೆರಿಯರ್ ಬೇಗ ಕ್ಲೋಸ್ ಆಯ್ತಾ..?

ಇಷ್ಟೆಲ್ಲಾ ಇದ್ರೂ, ಈ ವರ್ಷದ ಐಪಿಎಲ್‌ಗೂ ಮುನ್ನ ಮುಂಬೈ ಫ್ರಾಂಚೈಸಿ, ರೋಹಿತ್‌ರನ್ನ ನಾಯಕತ್ವದಿಂದ ಕೆಳಗಿಳಿಸಿತ್ತು. ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನ ಕರೆತಂದು ನಾಯಕನ ಪಟ್ಟ ಕಟ್ಟಿತ್ತು. ಆದ್ರೆ, ಪಾಂಡ್ಯ ನಾಯಕತ್ವದಲ್ಲಿ ಮಂಬೈ ಇಂಡಿಯನ್ಸ್ ಅಟ್ಟರ್ ಫ್ಲಾಪ್ ಶೋ ನೀಡಿತ್ತು. ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನ ಅಲಂಕರಿಸಿತ್ತು. 

ಡೆಲ್ಲಿ ಕ್ಯಾಪಿಟಲ್ಸ್-ಲಖನೌ ಸೂಪರ್ ಜೈಂಟ್ಸ್ ಮಾಸ್ಟರ್ ಪ್ಲ್ಯಾನ್..! 

5 ಬಾರಿ ಕಪ್ ಗೆದ್ದುಕೊಟ್ಟರೂ, ತಮ್ಮನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ, ರೋಹಿತ್ ಫ್ರಾಂಚೈಸಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇದ್ರಿಂದ ಮುಂದಿನ IPLನಲ್ಲಿ ರೋಹಿತ್  ಮುಂಬೈ ಪರ ಬ್ಯಾಟ್ ಬೀಸಲ್ಲ ಅಂತ ಹೇಳಲಾಗ್ತಿದೆ. ಮತ್ತೊಂದೆಡೆ ಹಲವು ಫ್ರಾಂಚೈಸಿಗಳು ರೋಹಿತ್‌ರನ್ನ ಬುಟ್ಟಿಗೆ ಹಾಕಿಕೊಳ್ಳಲು ಕಾದು ಕುಳಿತಿವೆ. ಕೋಟಿ.-ಕೋಟಿ ಸುರಿಯಲು ರೆಡಿಯಾಗಿವೆ. ಹತ್ತಲ್ಲ.. ಇಪ್ಪತ್ತಲ್ಲ ಬರೋಬ್ಬರಿ 50 ಕೋಟಿ ರುಪಾಯಿ ರೋಹಿತ್‌ಗಾಗಿಯೇ ಮೀಸಲಿಟ್ಟಿವೆ. 

ಒಂದೊಳ್ಳೆ ಕಾರ್ಯಕ್ಕೆ ರಾಹುಲ್ ದಂಪತಿ ನಡೆಸಿದ ಹರಾಜು: ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಕೊಹ್ಲಿ ಜೆರ್ಸಿ..!

ಯೆಸ್, ನೀವು ಕೇಳಿದ್ದು ನಿಜ ರೋಹಿತ್ ಆಕ್ಷನ್‌ಗೆ ಬಂದ್ರೆ ಅವರನ್ನ ಖರೀದಿಸಲು ಎಲ್ಲಾ ತಂಡಗಳು ತುದಿಗಾಲಲ್ಲಿ ನಿಂತಿವೆ.. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ & ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಮಾಸ್ಟರ್ ಪ್ಲ್ಯಾನ್ ರೂಪಿಸಿವೆ. ರೋಹಿತ್‌ಗಾಗಿಯೇ 50 ಕೋಟಿ ರೆಡಿ ಮಾಡಿಕೊಂಡಿವೆ. ಒಟ್ಟು ಹರಾಜು ಮೊತ್ತದಲ್ಲಿ 50ಕೋಟಿಯನ್ನ ತೆಗೆದಿಡಲು ನಿರ್ಧರಿಸಿವೆ. ಆ ಮೂಲಕ ಟೀಂ ಇಂಡಿಯಾ ನಾಯಕನನ್ನ ಖರೀದಿಸಲೇಬೇಕು ಅಂತ ಪಣತೊಟ್ಟಿವೆ. 

ನಾವು ಇಷ್ಟೊತ್ತು ಹೇಳಿದ್ದೆಲ್ಲಾ ಕೇವಲ ಊಹಪೋಹಗಳು, ಅಂತೆ ಕಂತೆಗಳಷ್ಟೇ. ಆದ್ರೆ, ಒಂದು ವೇಳೆ ರೋಹಿತ್ ಹರಾಜಿಗೆ ಬಂದ್ರೆ, ಐಪಿಎಲ್ ಚರಿತ್ರೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗೋದಂತೂ ಪಕ್ಕಾ..!! 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!