RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

By Web Desk  |  First Published May 7, 2019, 3:13 PM IST

IPL ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್‌ಗೆ ದಂಡ ಹಾಕಲಾಗಿದೆ. ಇಷ್ಟು  ನಿಯಮ ಉಲ್ಲಂಘನೆಗೆ ಕಾರಣದಿಂದ ಆಟಗಾರರು ದಂಡ ಕಟ್ಟುತ್ತಿದ್ದರು. ಇದೀಗ ಅನುಚಿತ ವರ್ತನೆ ತೋರಿದ ಅಂಪೈರ್ ದಂಡ ಕಟ್ಟಿದ ಘಟನೆ ನಡೆದಿದೆ. 


ಬೆಂಗಳೂರು(ಮೇ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಟೀಕೆ ಹಾಗೂ ವಿವಾದಕ್ಕೆ ಗುರಿಯಾಗಿದ್ದು ಅಂಪೈರ್. ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡಿರುವ ಅಂಪೈರ್ ವಿರುದ್ದ ಆಟಗಾರರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ RCB ಮೇಲಿನ ಸಿಟ್ಟಿನಲ್ಲಿ ಅಂಪೈರ್ ಕೊಠಡಿಯ ಬಾಗಿಲಿಗೆ ಒದ್ದ ಘಟನೆ ನಡೆದಿದೆ. 

ಇದನ್ನೂ ಓದಿ: ಮಗಳಿಗೆ ಅರ್ಧಶತಕ ಡೆಡಿಕೇಟ್ ಮಾಡಿದ ರೋಹಿತ್ ಶರ್ಮಾ

Latest Videos

undefined

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಅಂಪೈರ್ ಜವಾಬ್ದಾರಿ ನಿರ್ವಹಿಸುತ್ತಿದ್ದ ನಿಗೆಲ್ ಲಾಂಗ್ ನೀಡಿದ ತೀರ್ಪು RCB ಆಟಗಾರರನ್ನು ಕೆರಳಿಸಿತ್ತು. ಉಮೇಶ್ ಬೌಲಿಂಗ್ ವೇಳೆ ಅಂಪೈರ್ ನಿಗೆಲ್ ನೋ ಬಾಲ್ ನೀಡಿದ್ದರು. ಆದರೆ ಟಿವಿ ರಿಪ್ಲೇನಲ್ಲಿ ಉಮೇಶ್ ಯಾದವ್ ನೋ ಬಾಲ್ ಲೈನ್ ದಾಟಿರಲಿಲ್ಲ.

ಇದನ್ನೂ ಓದಿ: RCB ಸೋಲಿಗೆ ಕಾರಣ ತಿಳಿಸಿದ ವಿಜಯ್ ಮಲ್ಯ!

ಉಮೇಶ್ ಯಾಧವ್ ಅಂಪೈರ್ ತೀರ್ಪಿನ ವಿರುದ್ದ ಅಸಮಾಧಾನ ಹೊರಹಾಕಿದ್ದರು. ತಕ್ಷಣ ನಾಯಕ ವಿರಾಟ್ ಕೊಹ್ಲಿ ಅಂಪೈರ್ ವಿರುದ್ಧ ವಾಗ್ವಾದಕ್ಕಿಳಿದಿದ್ದರು. ನೋ ಬಾಲ್ ಇಲ್ಲದಿದ್ದರೂ ನೋ ಬಾಲ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನಿಂಗ್ಸ್ ಅಂತ್ಯದಲ್ಲಿ ಕೊಹ್ಲಿ ಹಾಗೂ ಉಮೇಶ್ ಯಾದವ್ ಜೊತೆಗಿನ ಮಾತಿನ ಚಕಮಕಿ ಅಂಪೈರ್ ನಿಗೆಲ್ ಸಿಟ್ಟು ನೆತ್ತಿಗೇರಿಸಿತು. ಇನ್ನಿಂಗ್ಸ್ ಮುಗಿಸಿ ಅಂಪೈರ್ ಕೊಠಡಿಗೆ ತೆರಳಿದ ನಿಗೆಲ್ ಕೊಠರಿಯ ಬಾಗಿಲಿಗೆ ಒದ್ದು ಸಿಟ್ಟು ಹೊರಹಾಕಿದರು.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಕನ್ನಡದಲ್ಲಿ ವಿರಾಟ್ ಕೊಹ್ಲಿ ಟ್ವೀಟ್!

ಅಂಪೈರ್ ಕೊಠಡಿಗೆ ಒದ್ದು ಅನುಚಿತ ವರ್ತನೆ ತೋರಿದ ನಿಗೆಲ್ ವಿರುದ್ದ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ದೂರು ನೀಡಿದೆ. ಇಷ್ಟೇ ಅಲ್ಲ 5,000 ರೂಪಾಯಿ ದಂಡ ವಿಧಿಸಿದೆ. ಈ ಮೂಲಕ ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಪೈರ್‌ಗೆ ದಂಡ ಹಾಕಲಾಗಿದೆ. ಈ ಪಂದ್ಯದಲ್ಲಿ ಹೈದರಾಬಾದ್  ವಿರುದ್ದ RCB ಗೆಲುವಿನ ನಗೆ ಬೀರಿತ್ತು. 

ಇಂಗ್ಲೀಷ್‌ನಲ್ಲಿ ಈ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:

click me!