ಪಾಕ್ ಟಿ20 ಲೀಗ್'ಗೆ ಇಬ್ಬರು ಚೀನಿಯರು ಎಂಟ್ರಿ..!

By Suvarna Web DeskFirst Published Oct 22, 2017, 11:36 AM IST
Highlights

ಚೀನಾ ದೇಶವು ಪುರುಷರ ಹಾಗೂ ಮಹಿಳಾ ತಂಡಗಳು ಹೊಂದಿದ್ದರೂ ಇಲ್ಲಿಯವರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಕರಾಚಿ(ಅ.22): ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನ 3ನೇ ಆವೃತ್ತಿ ಮುಂದಿನ ವರ್ಷದ ಆದಿಯಲ್ಲಿ ನಡೆಯಲಿದ್ದು, ಈ ಆವೃತ್ತಿಯಲ್ಲಿ ಚೀನಾದ ಇಬ್ಬರು ಆಟಗಾರರು ಭಾಗವಹಿಸಲಿದ್ದಾರೆ.

ಪೆಶಾವರ ಜಲ್ಮಿ ತಂಡದೊಂದಿಗೆ ಜಿಯಾನ್ ಲೀ ಹಾಗೂ ಯುಫೆ ಜಾಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಜಲ್ಮಿ ತಂಡದ ಫ್ರಾಂಚೈಸಿಗಳು ಈ ಸುದ್ದಿಯನ್ನು ಖಚಿತ ಪಡಿಸಿದ್ದು, ಮುಂದಿನ ಆವೃತ್ತಿಯಲ್ಲಿ ಚೀನಾದ ಈ ಇಬ್ಬರು ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ.  ಪೇಶಾವರ್ ಜಲ್ಮಿ ತಂಡ ಹಾಲಿ ಪಿಸಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಚೀನಾ ದೇಶವು ಪುರುಷರ ಹಾಗೂ ಮಹಿಳಾ ತಂಡಗಳು ಹೊಂದಿದ್ದರೂ ಇಲ್ಲಿಯವರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ.

click me!