ಕ್ರಿಕೆಟಿಗ ಶ್ರೀಶಾಂತ್ ಕಟ್ಟು ಮಸ್ತು ದೇಹಕ್ಕೆ ಹರ್ಭಜನ್ ಸಿಂಗ್ ಸುಸ್ತಾಗಿದ್ದೇಕೆ?

Published : Jul 09, 2018, 04:05 PM IST
ಕ್ರಿಕೆಟಿಗ ಶ್ರೀಶಾಂತ್ ಕಟ್ಟು ಮಸ್ತು ದೇಹಕ್ಕೆ ಹರ್ಭಜನ್ ಸಿಂಗ್ ಸುಸ್ತಾಗಿದ್ದೇಕೆ?

ಸಾರಾಂಶ

ಕ್ರಿಕೆಟಿಗ ಎಸ್ ಶ್ರೀಶಾಂತ್ ಕಟ್ಟು ಮಸ್ತು ದೇಹ ಬೆಳೆಸಿರೋದಕ್ಕೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ನೆಟ್ಟಿಗರು , ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ಟ್ರೋಲ್ ಮಾಡಿದ್ದಾರೆ. ಶ್ರೀಶಾಂತ್ ಜಿಮ್ ಬಾಡಿಯಿಂದ ಹರ್ಭಜನ್ ಸಿಂಗ್ ಟ್ರೋಲ್ ಆಗಿದ್ದು ಯಾಕೆ? ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.

ತಿರುವನಂತಪುರ(ಜು.09): ವಿವಾದಿತ ವೇಗಿ ಎಸ್ ಶ್ರೀಶಾಂತ್ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ಕಟ್ಟು ಮಸ್ತು ದೇಹ ಮಾಡಿಕೊಂಡಿರುವ ಶ್ರೀಶಾಂತ್ ಬಾರಿ ಸದ್ದು ಮಾಡುತ್ತಿದ್ದಾರೆ.

ಶ್ರೀಶಾಂತ್ ಬಾಡಿ ಬಿಲ್ಡ್ ನೋಡಿದ ಅಭಿಮಾನಿಗಳು ಬಾಹುಬಲಿ ಎಂದು ಕರೆದಿದ್ದಾರೆ. ಆದರೆ ನೆಟ್ಟಿಗರ ಅಭಿಪ್ರಾಯ ಅಲ್ಲಿಗೆ ಮುಗಿದಿಲ್ಲ. ಶ್ರೀಶಾಂತ್ ಜಿಮ್ ಬಾಡಿಗೆ, ಕ್ರಿಕೆಟಿಗ ಹರ್ಭಜನ್ ಸಿಂಗ್‌ ಟ್ರೋಲ್ ಆಗಿದ್ದಾರೆ.

ಇದನ್ನು ಓದಿ: ಕ್ರಿಕೆಟಿಗ ಎಸ್ ಶ್ರೀಶಾಂತ್ ಈಗ ಹೇಗಾಗಿದ್ದಾರೆ ಗೊತ್ತಾ?

2008ರ ಐಪಿಎಲ್ ಟೂರ್ನಿಯಲ್ಲಿ ಹರ್ಭಜನ್  ಸಿಂಗ್, ವೇಗಿ ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. ಇದೀಗ ಶ್ರೀಶಾಂತ್ ಜಿಮ್ ಬಾಡಿ ನೋಡಿ ಹರ್ಭಜನ್ ಸಿಂಗ್ ಮತ್ತೊಮ್ಮೆ ಕಪಾಳಮೋಕ್ಷ ಮಾಡೋ ಮನಸ್ಸು ಮಾಡುವುದಿಲ್ಲ ಎಂದು ಟ್ವೀಟ್ ಮೂಲಕ ಟ್ರೋಲ್ ಮಾಡಿದ್ದಾರೆ.

 

 

ಮಲೆಯಾಳಂ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ಈಗಾಗಲೇ ನಾಯಕ ಹಾಗೂ ಪೋಷಕ ನಟನಾಗಿ ನಟಿಸಿರುವ ಶ್ರೀಶಾಂತ್ ಇದೀಗ ಹೊಸ ಚಿತ್ರಕ್ಕಾಗಿ ಈ ಅವತಾರವೆತ್ತಿದ್ದಾರೆ. ಶ್ರೀ ಕಟ್ಟು ಮಸ್ತಾದ ದೇಹಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?