Cricket: ಕೊಹ್ಲಿ ಜೊತೆ ಗಲಾಟೆ, ಬೂಮ್ರಾಗೆ ಸಿಕ್ಸರ್ ಬಾರಿಸಿದ್ದ ಆಸೀಸ್ ಪಂಟರ್‌ಗೆ ಭಾರತದ ವೇಗಿ ತುಷಾರ್ ದೇಶಪಾಂಡೆ ತಕ್ಕ ಶಾಸ್ತಿ!

Published : Sep 24, 2026, 10:30 AM IST
Sports

ಸಾರಾಂಶ

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಸಿಕ್ಸರ್ ಬಾರಿಸಿ, ವಿರಾಟ್ ಕೊಹ್ಲಿ ಜೊತೆ ವಾಗ್ವಾದ ನಡೆಸಿದ್ದ ಆಸ್ಟ್ರೇಲಿಯಾದ ಸ್ಯಾಮ್ ಕಾನ್ಸ್ಟಸ್‌ಗೆ ಭಾರತದ ವೇಗಿ ತುಷಾರ್ ದೇಶಪಾಂಡೆ ತಕ್ಕ ಪಾಠ ಕಲಿಸಿದ್ದಾರೆ. ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ನಡುವಿನ ಪಂದ್ಯದಲ್ಲಿ ತುಷಾರ್, ಕಾನ್ಸ್ಟಸ್ ಅವರನ್ನು ಎಲ್‍ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದಾರೆ.

ಡಿಸೆಂಬರ್ 2024 ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕ್ರಿಕೆಟ್ ಲೋಕವೇ ಬೆರಗಾಗುವಂತಹ ಘಟನೆಯೊಂದು ನಡೆದಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸುಮಾರು 4,400 ಎಸೆತಗಳನ್ನು ಎಸೆದು, ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಭಾರತದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾದ ಯುವ ಆಟಗಾರನೊಬ್ಬ ಕ್ರೂರವಾಗಿ ದಂಡಿಸಿದ್ದ.

ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕಾನ್ಸ್ಟಸ್ ನಡುವೆ ಕಿಡಿ!

ಅದು ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಸ್ ಅವರ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅದ್ಭುತ ಧೈರ್ಯ ತೋರಿದ್ದ ಕಾನ್ಸ್ಟಸ್, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಅಪರೂಪದ ರಿವರ್ಸ್ ಸ್ಕೂಪ್ ಸಿಕ್ಸರ್ ಬಾರಿಸಿ ಸೌಂಡ್ ಮಾಡಿದ್ದರು. ಅಷ್ಟೇ ಅಲ್ಲದೆ, ಬುಮ್ರಾ ಅವರ ಒಂದೇ ಓವರ್‌ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಬರೋಬ್ಬರಿ 18 ರನ್ ಚಚ್ಚಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಅವರಂತಹ ವಿಶ್ವದ ನಂಬರ್ 1 ಬೌಲರ್ ಮೇಲೆ ಈ ಮಟ್ಟದ ದಾಳಿ ನಡೆದಿದ್ದು ಅದೇ ಮೊದಲ ಬಾರಿಯಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲೇ 65 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 92.31 ಸ್ಟ್ರೈಕ್ ರೇಟ್‌ನಲ್ಲಿ 60 ರನ್ ಸಿಡಿಸಿ ಮೆರೆದಿದ್ದರು. ಈ ಪಂದ್ಯದ ವೇಳೆ ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕಾನ್ಸ್ಟಸ್ ನಡುವೆ ಮೈದಾನದಲ್ಲೇ ಕಿಡಿ ಹಾರುವಂತಹ ವಾಗ್ವಾದವೂ ನಡೆದಿತ್ತು. ಆದರೆ, ಭಾರತದ ವೇಗಿಗಳನ್ನು ಹಗುರವಾಗಿ ಪರಿಗಣಿಸಿದ್ದ ಆಸ್ಟ್ರೇಲಿಯಾದ ಈ ಯುವ ಆಟಗಾರನಿಗೆ ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ನಡುವಿನ ಪ್ರಸ್ತುತ ಚಾಲ್ತಿಯಲ್ಲಿರುವ ಸರಣಿಯಲ್ಲಿ ಸರಿಯಾದ ಪಾಠ ಕಲಿಸಲಾಗಿದೆ.

ಲೆಕ್ಕ ಚುಕ್ತಾ ಮಾಡಿದ ತುಷಾರ್!

ಪ್ರಸ್ತುತ ಆಸ್ಟ್ರೇಲಿಯಾ ‘ಎ’ ತಂಡ ಭಾರತ ಪ್ರವಾಸದಲ್ಲಿದ್ದು, ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮುಂಬೈ ಮೂಲದ ಭಾರತೀಯ ವೇಗಿ ತುಷಾರ್ ದೇಶಪಾಂಡೆ, ಸ್ಯಾಮ್ ಕಾನ್ಸ್ಟಸ್ ಅವರನ್ನು ಅತ್ಯಂತ ಚಾಣಾಕ್ಷ ಬೌಲಿಂಗ್ ಮೂಲಕ ಎಲ್‍ಬಿಡಬ್ಲ್ಯೂ (LBW) ಬಲೆಗೆ ಬೀಳಿಸಿದ್ದಾರೆ. ಬುಮ್ರಾ ಮತ್ತು ಕೊಹ್ಲಿಗೆ ಸವಾಲು ಹಾಕಿದ್ದ ಕಂಗಾರೂ ಆಟಗಾರನನ್ನು ತುಷಾರ್ ದೇಶಪಾಂಡೆ ಕೇವಲ 25 ರನ್‌ಗಳಿಗೆ (76 ಎಸೆತ) ಪೆವಿಲಿಯನ್‌ಗೆ ಅಟ್ಟುವ ಮೂಲಕ ಹಳೆಯ ಲೆಕ್ಕವನ್ನು ಚುಕ್ತಾ ಮಾಡಿದ್ದಾರೆ.

ಪ್ರಫುಲ್ ಹಿಂಗೆ ಸಾಥ್!

ಈ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಅವರ ಈ ಮಾರಕ ದಾಳಿಯ ಪರಿಣಾಮವಾಗಿ ಆಸ್ಟ್ರೇಲಿಯಾ 'ಎ' ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 171 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಜೇಸನ್ ಗರಿಷ್ಠ 46 ರನ್ ಗಳಿಸಿದರು. ಭಾರತದ ಪರ ಶಮ್ಸ್ ಮುಲಾನಿ 4 ವಿಕೆಟ್ ಪಡೆದು ಮಿಂಚಿದರೆ, ತುಷಾರ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಕಬಳಿಸಿದರು. ಅನ್ಶುಲ್ ಕಾಂಬೋಜ್ ಹಾಗೂ ಪ್ರಫುಲ್ ಹಿಂಗೆ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು. ಇದಕ್ಕೂ ಮುನ್ನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕುಮಾರ್ ಕುಶಾಗ್ರ ಅವರ ಭವ್ಯ 113 ರನ್ ಹಾಗೂ ಸಾಯಿ ಸುದರ್ಶನ್ ಅವರ 57 ರನ್‌ಗಳ ಕೊಡುಗೆಯಿಂದಾಗಿ ಟೀಮ್ ಇಂಡಿಯಾ 334 ರನ್ ಕಲೆಹಾಕಿತ್ತು. ಆಸ್ಟ್ರೇಲಿಯಾವನ್ನು 171 ರನ್‌ಗಳಿಗೆ ಕಟ್ಟಿಹಾಕಿದ ಭಾರತ ‘ಎ’ ತಂಡ, ಪ್ರಸ್ತುತ 163 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಷ್ಯನ್ ಗೇಮ್ಸ್‌ 2026: ಭಾರತಕ್ಕೆ ಬೆಳ್ಳಿ-ಕಂಚಿನ ಹರಿವು, ಬಂಗಾರಕ್ಕೆ ಬರ..! ಐತಿಹಾಸಿಕ ಪದಕ ಗೆದ್ದ ಮೀರಾಬಾಯಿ ಚಾನು
Rowing Star Salman khan: ಅಂದು ಉಬರ್ ಕ್ಯಾಬ್ ಚಾಲಕ, ಇಂದು ಏಷ್ಯನ್ ಗೇಮ್ಸ್ ಪದಕ ವಿಜೇತ! ಯಾರು ಈ ಸಲ್ಮಾನ್ ಖಾನ್?