ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

Published : Jan 29, 2019, 05:41 PM IST
ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

ಸಾರಾಂಶ

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ನೋವಾಕ್ ಜೋಕೋವಿಚ್, ಅಭಿಮಾನಿಗೆ ಆಟೋಗ್ರಾಫ್ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೋಕೋ ಜಾಕೆಟ್ ಆಟೋಗ್ರಾಫ್ ವಿಡಿಯೋ ಇಲ್ಲಿದೆ.

ಮೆಲ್ಬರ್ನ್(ಜ.29): ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸರ್ಬಿಯಾದ ನೋವಾಕ್ ಜೋಕೋವಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗೆಲುವಿನ ಬಳಿಕ ಕ್ರೀಡಾಂಗಣದಿಂದ ತೆರಳುವ ವೇಳೆ ಅಭಿಮಾನಿಗೆ ಆಟ್ರೋಗ್ರಾಫ್ ನೀಡಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

ಜೋಕೋವಿಚ್ ಆಟೋಗ್ರಾಫ್‌ಗಾಗಿ ಅಭಿಮಾನಿಯೊರ್ವ ಗೋಡೆ ಹತ್ತಿ ನಿಂತಿದ್ದ. ಜೋಕೋ ಹತ್ತಿರ ಬರುತ್ತಿದ್ದಂತೆ ಆಟೋಗ್ರಾಫ್‌ಗಾಗಿ ಕೇಳಿದ್ದಾನೆ. ಆದರೆ ಅಭಿಮಾನಿಗಳ ಬಳಿ ಆಟೋಗ್ರಾಫ್ ಪಡೆಯಲು ಪೇಪರ್ ಆಗಲಿ, ಪುಸ್ತಕವಾಗಲಿ ಯಾವುದೂ ಇರಲಿಲ್ಲ. ಎರಡು ಹೆಜ್ಜೆ ಮುಂದೆ ಹೋದ ಜೋಕೋವಿಚ್ ತಕ್ಷಣವೇ ನಿಂತು ತನ್ನ ಜಾಕೆಟ್ ಮೇಲೆ ಸಹಿ ಹಾಕಿ ಆ ಜಾಕೆಟನ್ನ ಅಭಿಮಾನಿಗೆ ನೀಡಿದರು.

 

 

ಇದನ್ನೂ ಓದಿ: ರಣಜಿ ವಿವಾದ: ಚೇತೇಶ್ವರ್ ಪೂಜಾರ ಸಮರ್ಥಿಕೊಂಡ ಕೋಚ್!

ಜೋಕೋವಿಚ್ ಕಾರ್ಯಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಅತ್ಯಂತ ಅದೃಷ್ಟದ ವ್ಯಕ್ತಿ ಎಂದರೆ ಜೋಕೋ ಜಾಕೆಟ್ ಪಡೆದ ಅಭಿಮಾನಿ ಎಂದು ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಚಾಂಪಿಯನ್ ಜೋಕೋ ಅತ್ಯಂತ ಸರಳ ವ್ಯಕ್ತಿತ್ವ ಎಂದು ಪ್ರಶಂಸಿದ್ದಾರೆ.

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!